ಬಿಹಾರದಲ್ಲಿನ ಈ ಫಲಿತಾಂಶ ನಿಜಕ್ಕೂ ಆಘಾತಕಾರಿ. ಆರಂಭದಿಂದಲೂ ನ್ಯಾಯಯುತವಲ್ಲದ ಚುನಾವಣೆಯಲ್ಲಿ ನಾವು ಗೆಲ್ಲುವಲ್ಲಿ ವಿಫಲರಾಗಿದ್ದೇವೆ.
ಇದು ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸುವ ಹೋರಾಟ. ಕಾಂಗ್ರೆಸ್ ಪಕ್ಷ ಮತ್ತು ಭಾರತ ಮೈತ್ರಿಕೂಟ ಈ ಫಲಿತಾಂಶವನ್ನು ಆಳವಾಗಿ ಪರಿಶೀಲಿಸುತ್ತವೆ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸುವ ಪ್ರಯತ್ನಗಳನ್ನು ತೀವ್ರಗೊಳಿಸುತ್ತವೆ ಎಂದಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ನೆಟ್ಟಿಗರು, ಪ್ರತೀ ಬಾರಿ ಇದೇ ಮಾತು ಹೇಳ್ತಿದ್ದೀರಾ, ನಿಮ್ಮ ಸೋಲಿಗೆ ನೆಪಗಳನ್ನು ಹುಡುಕುತ್ತಾ ಕೂರುತ್ತಿದ್ದೀರಿ. ನಿಮ್ಮ ನಾಯಕತ್ವವೂ ವಿಫಲವಾಗಿದೆ ಎಂದು ಒಪ್ಪಿಕೊಳ್ಳೋದು ಯಾವಾಗ ಎಂದು ಪ್ರಶ್ನಿಸಿದ್ದಾರೆ. ಇದೇ ರೀತಿ ವಿದೇಶದಲ್ಲಿ ಕುಳಿತುಕೊಂಡು ಟ್ವೀಟ್ ಮಾಡುತ್ತಿದ್ದರೆ ಏನು ಪ್ರಯೋಜನ ಎಂದಿದ್ದಾರೆ. ಮತ್ತೆ ಕೆಲವರು ವೋಟ್ ಚೋರಿ, ಸಂವಿಧಾನ ಎಂದು ಹೇಳುತ್ತಿದ್ದರೆ ಮುಂದಿನ ಚುನಾವಣೆಯಲ್ಲೂ ಇದೇ ಕತೆ ಗ್ಯಾರಂಟಿ ಎಂದಿದ್ದಾರೆ.