Select Your Language

Notifications

webdunia
webdunia
webdunia
webdunia

ಯೂನಿಯನ್ ಬಜೆಟ್ ಬಗ್ಗೆ ರಾಹುಲ್ ಗಾಂಧಿ ಅಚ್ಚರಿಯ ಪ್ರತಿಕ್ರಿಯೆ

Rahul Gandhi

Krishnaveni K

ನವದೆಹಲಿ , ಶನಿವಾರ, 1 ಫೆಬ್ರವರಿ 2025 (15:44 IST)
ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಂಡಿಸಿರುವ ಯೂನಿಯನ್ ಬಜೆಟ್ 2025 ರ ಬಗ್ಗೆ ರಾಹುಲ್ ಗಾಂಧಿ ಅಚ್ಚರಿಯ ಪ್ರತಿಕ್ರಿಯೆ ನೀಡಿದ್ದಾರೆ.

ಇಂದು ಮಂಡನೆಯಾದ ಬಜೆಟ್ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಈ ಸರ್ಕಾರಕ್ಕೆ ಯೋಜನೆಗಳೇ ಇಲ್ಲ. ಬಜೆಟ್ ನೋಡಿದರೇ ಈ ಸರ್ಕಾರದಲ್ಲಿ ಯೋಜನೆಗಳು ಖಾಲಿಯಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಟೀಕಿಸಿದ್ದಾರೆ.

ಈ ಬಜೆಟ್ ಬುಲೆಟ್ ಗಾಯಕ್ಕೆ ಬ್ಯಾಂಡೈಡ್ ಹಾಕಿದಂತೆ ಎಂದು ರಾಹುಲ್ ಟೀಕಿಸಿದ್ದಾರೆ. ಜಾಗತಿಕವಾಗಿ ಅನಿಶ್ಚತತೆಯಿರುವಾಗ ನಮ್ಮ ಆರ್ಥಿಕತೆಯನ್ನು ಸರಿದಾರಿಗೆ ತರಲು ಯೋಜನೆಗಳು ಬೇಕಾಗಿತ್ತು. ಆದರೆ ಈ ಸರ್ಕಾರಕ್ಕೆ ಅಂತಹ ಯಾವುದೇ ಯೋಜನೆಯಿಲ್ಲ ಎಂದು ರಾಹುಲ್ ಟೀಕಿಸಿದ್ದಾರೆ.

ನಿನ್ನೆ ಬಜೆಟ್ ತಯಾರಿ ಬಗ್ಗೆ ಟೀಕಿಸಿದ್ದ ರಾಹುಲ್, ನಿರ್ಮಲಾ ಸೀತಾರಾಮನ್ ಬಜೆಟ್ ತಯಾರಿ ಸಮಿತಿಯಲ್ಲಿ ಒಬ್ಬರೇ ಒಬ್ಬ ದಲಿತರು ಇಲ್ಲ ಎಂದಿದ್ದರು.


Share this Story:

Follow Webdunia kannada

ಮುಂದಿನ ಸುದ್ದಿ

ಬಜೆಟ್ 2025: 8 ವರ್ಷಗಳಲ್ಲಿ ಎಫ್‌ಎಂ ನಿರ್ಮಲಾ ಸೀತಾರಾಮನ್ ಅವರ ಧರಿಸಿದ ಸೀರಿಗಳ ವಿಶೇಷತೆ ಗೊತ್ತಾ