ಚುನಾವಣಾ ಆಯೋಗಕ್ಕೂ ಅಂಕುಶವಿರಬೇಕು ಎಂಬ ರಾಹುಲ್ ಗಾಂಧಿ ಅಭಿಪ್ರಾಯ ಒಪ್ಪುತ್ತೀರಾ

Krishnaveni K
ಗುರುವಾರ, 11 ಡಿಸೆಂಬರ್ 2025 (10:31 IST)
ನವದೆಹಲಿ: ದೇಶದಲ್ಲಿ ಎಲ್ಲಾ ಚುನಾವಣೆಗಳಲ್ಲಿ ಮತಗಳ್ಳತನವಾಗುತ್ತಿದೆ ಎಂದು ಆರೋಪಿಸುತ್ತಿರುವ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಚುನಾವಣಾ ಆಯೋಗಕ್ಕೂ ಅಂಕುಶಬೇಕು ಎಂದಿದ್ದಾರೆ. ಅವರ ಅಭಿಪ್ರಾಯವನ್ನು ಒಪ್ಪುತ್ತೀರಾ?

ಲೋಕಸಭೆಯಲ್ಲಿ ಎಸ್ಐಆರ್, ಮತಗಳ್ಳತನದ ಬಗ್ಗೆ ಮಾತನಾಡುವಾಗ ರಾಹುಲ್ ಗಾಂಧಿ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗದ ವಿರುದ್ಧ  ವಾಗ್ದಾಳಿ ನಡೆಸಿದ್ದಾರೆ. ಚುನಾವಣಾ ಆಯೋಗಕ್ಕೆ ಮೋದಿ, ಅಮಿತ್ ಶಾ ಹೇಳಿದವರೇ ಆಯ್ಕೆಯಾಗುತ್ತಾರೆ. ಚುನಾವಣಾ ಆಯೋಗದ ಮನೋಭಾವಾ ಹೇಗಾಗಿದೆ ಎಂದರೆ ಅವರನ್ನು ಏನು ಮಾಡಿದರೂ  ಯಾರೂ ಪ್ರಶ್ನಿಸುವಂತಿಲ್ಲ ಎನ್ನುವಂತಾಗಿದೆ.

ಆದರೆ ಇದು ಹೀಗೇ ಇರಲ್ಲ. ನಾವು ಅಧಿಕಾರಕ್ಕೆ ಬಂದಾಗ ಈ ನಿಯಮ ಬದಲಾವಣೆ ಮಾಡಲಿದ್ದೇವೆ ಎಂದಿದ್ದಾರೆ. ಈ ಮೂಲಕ ಚುನಾವಣಾ ಆಯೋಗ ಸ್ವಾಯತ್ತವಾಗಿರಲ್ಲ, ಸರ್ಕಾರದ ಅಂಕುಶವಿರಲಿದೆ ಎಂದು ಪರೋಕ್ಷವಾಗಿ ಸುಳಿವು ನೀಡಿದ್ದಾರೆ.

ಒಂದು ವೇಳೆ ಈ ರೀತಿ ಆದಲ್ಲಿ ಚುನಾವಣಾ ಆಯೋಗ ಈಗಿನಂತೆ ಸ್ವತಂತ್ರ ಸಂಸ್ಥೆಯಾಗಿರುವುದಿಲ್ಲ. ಅದೂ ಕೂಡಾ ಇತರೆ ಸಂಸ್ಥೆಗಳಂತೆ ಸರ್ಕಾರದ ಅಧೀನಕ್ಕೆ ಒಳಪಟ್ಟ ಸಂಸ್ಥೆಯಾಗಲಿದೆ. ಆಗ ಕೇಂದ್ರ ಸರ್ಕಾರದ ಕೈಯಲ್ಲೇ ಚುನಾವಣಾ ಆಯೋಗದ ಸೂತ್ರವಿರಲಿದೆ. ಇದರಿಂದ ಚುನಾವಣೆಗಳು ಪಾರದರ್ಶಕವಾಗಿರುತ್ತದೆ ಎಂದು ಹೇಳಲಾಗದು. ಆದರೆ ಚುನಾವಣಾ ಆಯೋಗದ ನಿರ್ಧಾರವನ್ನು ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನೆ, ತಿದ್ದುಪಡಿ ಮಾಡಬಹುದು. ಈಗಿನಂತೆ ಚುನಾವಣಾ ಆಯೋಗದ ನಿರ್ಧಾರವೇ ಅಂತಿಮವಾಗಿರುವುದಿಲ್ಲ. ಹೀಗಾಗಿ ರಾಹುಲ್ ಹೇಳಿದಂತೆ ಮಾಡಿದರೆ ಚುನಾವಣೆಗಳ ಮೇಲೆ ಈಗಿನಷ್ಟೂ ವಿಶ್ವಾಸಾರ್ಹತೆ ಉಳಿದುಕೊಳ್ಳುವುದು ಅನುಮಾನವಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಾನೇನು ಮಾತನಾಡಬೇಕೆಂದು ನಾನು ನಿರ್ಧರಿಸುತ್ತೇನೆ: ರಾಹುಲ್ ಗಾಂಧಿ ಬೆವರಿಳಿಸಿದ ಅಮಿತ್ ಶಾ Video

ಸಿಎಂ ಬದಲಾವಣೆ ಬಗ್ಗೆ ಬೆಳಗಾವಿಯಲ್ಲೇ ನಡೆಯಿತು ಮಹತ್ವದ ವಿದ್ಯಮಾನ

ಚರ್ಚೆಗೆ ಬನ್ನಿ ಎಂದು ಅಮಿತ್ ಶಾಗೆ ಸವಾಲು ಹಾಕಿ ರಾಹುಲ್ ಗಾಂಧಿ ವಿದೇಶಕ್ಕೆ ಹೋದರೆ ಹೇಗೆ

Karnataka Weather: ತಾಪಮಾನದಲ್ಲಿ ಮತ್ತಷ್ಟು ಇಳಿಕೆ, ಹವಾಮಾನ ವರದಿ ಗಮನಿಸಿ

ಅಗ್ರಹಾರದಲ್ಲಿ ಅಕ್ರಮ ಹೆಚ್ಚು ಬೆನ್ನಲ್ಲೇ, ಖಡಕ್ ಪೊಲೀಸ್ ಅಧಿಕಾರಿ ಎಂಟ್ರಿ, ಕೈದಿಗಳಿಗೆ ನಡುಕ

ಮುಂದಿನ ಸುದ್ದಿ
Show comments