Select Your Language

Notifications

webdunia
webdunia
webdunia
webdunia

ಕಡಿಮೆ ಬಡ್ಡಿದರಗಳಿಂದ ಮಾರುಕಟ್ಟೆಗಳು ವಿರೂಪ: ರಾಜನ್ ಎಚ್ಚರಿಕೆ

ಕಡಿಮೆ ಬಡ್ಡಿದರಗಳಿಂದ ಮಾರುಕಟ್ಟೆಗಳು ವಿರೂಪ: ರಾಜನ್ ಎಚ್ಚರಿಕೆ
ನ್ಯೂಯಾರ್ಕ್: , ಮಂಗಳವಾರ, 6 ಸೆಪ್ಟಂಬರ್ 2016 (19:38 IST)
ಈ ತಿಂಗಳು ಅಧಿಕಾರಾವಧಿ ಮುಗಿಸಿದ ಆರ್‌ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ,ಕಡಿಮೆ ಬಡ್ಡಿದರಗಳು ಜಾಗತಿಕವಾಗಿ ಮಾರುಕಟ್ಟೆಗಳನ್ನು ವಿರೂಪಗೊಳಿಸುತ್ತದೆ ಎಂದು ಹೇಳಿದ್ದಾರೆ.
 
ಅಮೆರಿಕ ಮತ್ತು ಯುರೋಪ್ ಬೆಳವಣಿಗೆಗೆ ಉತ್ತೇಜಿಸುವ ಕ್ರಮವಾಗಿ ಬಡ್ಡಿ ದರಗಳನ್ನು ಕಡಿಮೆ ಪ್ರಮಾಣದಲ್ಲಿ ಇರಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು ಆ ರಾಷ್ಟ್ರಗಳು ಬಡ್ಡಿದರಗಳನ್ನು ಏರಿಸಿದರೆ, ಪ್ರಗತಿ ಕುಂಠಿತವಾಗುತ್ತೆಂಬ ಭಯದಲ್ಲಿ ಸಿಕ್ಕಿಬಿದ್ದಿವೆ ಎಂದು ಪ್ರತಿಕ್ರಿಯಿಸಿದರು. 
 
ಪ್ರಗತಿಗೆ ಉತ್ತೇಜಿಸಲು ಅಗತ್ಯವಾದ ವಿವಿಧ ರೀತಿಯ ಸುಧಾರಣೆಗಳು ಮತ್ತು ನೀತಿಯ ಇತರೆ ಅಸ್ತ್ರಗಳಿಗೆ ಕಡಿಮೆ ಬಡ್ಡಿ ದರ ಪರ್ಯಾಯವಲ್ಲ ಎಂದು ರಾಜನ್ ಹೇಳಿದರು.
 
ಸೆ. 4ರಂದು ಅಧಿಕಾರ ತ್ಯಜಿಸಿದ ರಾಜನ್ ನ್ಯೂಯಾರ್ಕ್ ಟೈಮ್ಸ್ ಜತೆ ಸಂದರ್ಶನದಲ್ಲಿ ಮಾತನಾಡುತ್ತಾ, ದೇಶವು ಈಗ ಕೈಗೊಂಡಿರುವ ಬ್ಯಾಂಕ್ ಶುದ್ಧೀಕರಣ ಕ್ರಿಯೆಯನ್ನು ಮುಗಿಸುತ್ತದೆಂದೂ ಹಾಗೂ ಕಡಿಮೆ ಹಣದುಬ್ಬರಕ್ಕೆ ಆದ್ಯತೆ ನೀಡುವುದನ್ನು ಮುಂದುವರಿಸುತ್ತದೆಂದು ಆಶಿಸಿದರು. 

Share this Story:

Follow Webdunia kannada

ಮುಂದಿನ ಸುದ್ದಿ

ಕೊಳೆಗೇರಿ ಮಕ್ಕಳಿಗೆ ಬೋಧಿಸಲು 3.5 ಲಕ್ಷ ವೇತನದ ಹುದ್ದೆ ತ್ಯಜಿಸಿದ ವಿರಾಟ್ ಶಾಹ್