Select Your Language

Notifications

webdunia
webdunia
webdunia
webdunia

ಕೊಳೆಗೇರಿ ಮಕ್ಕಳಿಗೆ ಬೋಧಿಸಲು 3.5 ಲಕ್ಷ ವೇತನದ ಹುದ್ದೆ ತ್ಯಜಿಸಿದ ವಿರಾಟ್ ಶಾಹ್

ಕೊಳೆಗೇರಿ ಮಕ್ಕಳಿಗೆ ಬೋಧಿಸಲು 3.5 ಲಕ್ಷ ವೇತನದ ಹುದ್ದೆ ತ್ಯಜಿಸಿದ ವಿರಾಟ್ ಶಾಹ್
ಅಹ್ಮದಾಬಾದ್: , ಮಂಗಳವಾರ, 6 ಸೆಪ್ಟಂಬರ್ 2016 (19:17 IST)
ವತ್ವಾನಗರದ ಸದ್ಭಾವ್‌ನಗರ ಪೊಲೀಸ್ ಚೌಕಿಯ ಮೂಲಕ ಹಾದುಹೋದರೆ, ಮೇಲ್ಛಾವಣಿಯ ಕೆಳಗೆ ಕೂತಿರುವ ವಿದ್ಯಾರ್ಥಿಗಳು ಕಣ್ಣಿಗೆ ಬೀಳುತ್ತಾರೆ. ಎಲ್. ಡಿ. ಎಂಜಿನಿಯರಿಂಗ್ ಕಾಲೇಜಿನ ಇನ್ಸ್‌ಟ್ರುಮೆಂಟೇಷನ್ ಮತ್ತು ಕಂಟ್ರೋಲ್ ಎಂಜಿನಿಯರ್  ವಿರಾಟ್ ಶಾಹ್ ವಾತ್ವಾ ಮತ್ತು ನಾರೋಲ್ ಪ್ರದೇಶಗಳಲ್ಲಿ ಕೊಳೆಗೇರಿ ಮಕ್ಕಳಿಗೆ ಗುಣಮಟ್ಟದ ಜೀವನ ಮತ್ತು ಶಿಕ್ಷಣ ಒದಗಿಸುತ್ತಾರೆ.
 
ಶಾಹ್ ದುಬೈನಲ್ಲಿ ಮಾಸಿಕ 3.5 ಲಕ್ಷ ರೂ. ಸಂಬಳ ಪಡೆಯುತ್ತಿದ್ದವರು ಅಲ್ಲಿನ ಕೆಲಸ ತ್ಯಜಿಸಿ 200 ವಿದ್ಯಾರ್ಥಿಗಳಿಗೆ ಉಚಿತ ಟ್ಯೂಷನ್ ನೀಡುವ ಮೂಲಕ ಮಕ್ಕಳ ಪಾಲಿಗೆ ದೇವರಾಗಿದ್ದಾರೆ.
 
ನಾನು ಯುವಕನಾಗಿದ್ದಾಗ ಇವೆಲ್ಲಾ ಸಂಭವಿಸಿತು. ನನ್ನ ತಂದೆ ಮಿಲ್ ಕೆಲಸಗಾರ. ಅವರು ಯಾರನ್ನೂ ಮನೆಯಿಂದ ಬರಿಗೈಲಿ ಕಳಿಸುತ್ತಿರಲಿಲ್ಲ. ಆದರೆ ಅವರು ಕೆಲಸ ಕಳೆದುಕೊಂಡಾಗ ಎಲ್ಲವೂ ಮುಗಿದಿತ್ತು. ಶಾಲಾ ಶಿಕ್ಷಣದ ಬಳಿಕ ಎಲ್.ಡಿ.ಎಂಜಿನಿಯರಿಂಗ್ ಕಾಲೇಜಿನಲ್ಲಿ ನೋಂದಣಿ ಮಾಡಿಕೊಂಡ ಬಳಿಕ ಎನ್‌ಎಚ್‌ಎಲ್ ಮುನ್ಸಿಪಲ್ ಕಾಲೇಜಿಗೆ ಸೇರಿದೆ.

ವಿದ್ಯಾರ್ಥಿಯಾಗಿದ್ದಾಗಲೇ ಟ್ಯೂಷನ್ ನೀಡಲಾರಂಭಿಸಿದ್ದೆ. ನನ್ನ ವಿದ್ಯಾಭ್ಯಾಸ ಮುಗಿಸಿದ ಬಳಿಕ ಅನೇಕ ಕಂಪನಿಗಳಲ್ಲಿ ಕೆಲಸ ಮಾಡಿ ಕೆಮಿಕಲ್ ಎಂಜಿನಿಯರ್  ತೃಪ್ತಿಯನ್ನು ಮದುವೆಯಾದೆ.ಅದಾದ ಬಳಿಕ ಜೀವನ ತಿರುವು ತೆಗೆದುಕೊಂಡು ವಿದೇಶದಲ್ಲಿ ಕೆಲಸ ಸಿಕ್ಕಿತು. ಸಾಕಷ್ಟು ಮೊತ್ತವನ್ನು ಸಂಪಾದಿಸಿದ ಬಳಿಕ ನಾನು ಹಿಂತಿರುಗಿದೆ ಎಂದು ಶಾಹ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಆರ್‌ಎಸ್‌ನಿಂದ ತಮಿಳುನಾಡಿಗೆ ನೀರು ಬಿಡುಗಡೆ: ಸರಕಾರಿ ಬಸ್ ಪುಡಿ ಪುಡಿ