Publish Date: Fri, 24 Apr 2026 (17:31 IST)
Updated Date: Fri, 24 Apr 2026 (17:33 IST)
ನವದೆಹಲಿ: ನಿರೀಕ್ಷೆಯಂತೇ ಎಎಪಿ ತೊರೆದು ರಾಜ್ಯ ಸಭಾ ಸಂಸದ ರಾಘವ್ ಚಡ್ಡಾ ಬಿಜೆಪಿ ಸೇರಿಕೊಂಡಿದ್ದಾರೆ. ಈ ಮೊದಲು ಎಎಪಿ ಅವರನ್ನು ಸಂಸತ್ ನಲ್ಲಿ ಪಕ್ಷದ ಉಪ ನಾಯಕ ಸ್ಥಾನದಿಂದ ಕಿತ್ತು ಹಾಕಿತ್ತು.
ರಾಘವ್ ಚಡ್ಡಾ ಸಂಸತ್ ನಲ್ಲಿ ಸದಾ ಜನಪರ ಪ್ರಶ್ನೆಗಳನ್ನು ಕೇಳುವುದರ ಮೂಲಕ ಜನಪ್ರಿಯರಾಗಿದ್ದರು. ಆದರೆ ಇತ್ತೀಚೆಗೆ ಅವರನ್ನು ಆಮ್ ಆದ್ಮಿ ಪಕ್ಷ ಪಕ್ಷದ ಉಪನಾಯಕನ ಸ್ಥಾನದಿಂದ ಕಿತ್ತು ಹಾಕಿತ್ತು. ಕೇಂದ್ರ ಸರ್ಕಾರದ ವಿರುದ್ಧ ಧ್ವನಿಯೆತ್ತಲ್ಲ ಎಂದು ಎಎಪಿ ಆಪಾದಿಸಿತ್ತು.
ಇದರ ಬೆನ್ನಲ್ಲೇ ಅವರು ಬಿಜೆಪಿ ಸೇರಿಕೊಳ್ಳಬಹುದು ಎಂದು ಊಹಾಪೋಹಗಳಿತ್ತು. ಅದೀಗ ನಿಜವಾಗಿದೆ. ಕೇವಲ ರಾಘವ್ ಚಡ್ಡಾ ಮಾತ್ರವಲ್ಲ ಅವರನ್ನು ಸೇರಿ ಒಟ್ಟು 7 ಎಎಪಿ ಸಂಸದರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ರಾಘವ್ ಚಡ್ಡಾ ಹೊರತಾಗಿ ಅಶೋಕ್ ಮಿತ್ತಲ್, ಸಂದೀಪ್ ಪಾಠಕ್, ಸ್ವಾತಿ ಮಲಿವಾಲ್, ಹರ್ಭಜನ್ ಸಿಂಗ್, ರಾಜಿಂದರ್ ಗುಪ್ತಾ ಮತ್ತು ವಿಕ್ರಮ್ ಜಿತ್ ಸಾಹ್ನಿ ಕೂಡಾ ಬಿಜೆಪಿ ಸೇರಿದ್ದಾರೆ. ಇದು ಎಎಪಿಗೆ ದೊಡ್ಡ ಹೊಡೆತವಾಗಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ