Select Your Language

Notifications

webdunia
webdunia
webdunia
webdunia

ಬಿಜೆಪಿಯ ಗುಲಾಮರಾಗಲು ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದಿದ್ದೇವಾ: ಅರವಿಂದ್ ಕೇಜ್ರಿವಾಲ್‌

ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್

Sampriya

ನವದೆಹಲಿ , ಗುರುವಾರ, 25 ಸೆಪ್ಟಂಬರ್ 2025 (18:00 IST)
ನವದೆಹಲಿ: ಲಡಾಖ್‌ನಲ್ಲಿನ ಪರಿಸ್ಥಿತಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್, ದೇಶವು ಬ್ರಿಟಿಷರಿಂದ ಸ್ವಾತಂತ್ರ್ಯ ಗಳಿಸಿದ್ದು ಆಕ್ರಮಣಕಾರರ ಬದಲಿಗೆ ಭಾರತೀಯ ಜನತಾ ಪಕ್ಷದ ಗುಲಾಮರಾಗಲು ಮಾತ್ರವೇ ಎಂದು ಪ್ರಶ್ನಿಸಿದ್ದಾರೆ. 

ಅಧಿಕಾರದ ವ್ಯಸನ ಮತ್ತು ಒಂದು ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡುತ್ತಿದೆ ಮತ್ತು ಸಂವಿಧಾನವು ನೀಡಿದ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ ಎಂದು ಕಿಡಿಕಾರಿದರು.

ಲಡಾಖ್‌ನಲ್ಲಿ ಇಂದು ನಡೆಯುತ್ತಿರುವುದು ಅತ್ಯಂತ ಆತಂಕಕಾರಿಯಾಗಿದೆ. ಪ್ರತಿಯೊಬ್ಬ ನಿಜವಾದ ದೇಶಭಕ್ತ ಲಡಾಖ್‌ನ ಜನರೊಂದಿಗೆ ನಿಲ್ಲಬೇಕು. 

ಸಾರ್ವಜನಿಕರು ಬ್ರಿಟಿಷರ ಬದಲು ಬಿಜೆಪಿಯ ಗುಲಾಮರಾಗಲು ನಾವು ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದಿದ್ದೇವೆಯೇ? ಭಗತ್ ಸಿಂಗ್ ಮತ್ತು ಚಂದ್ರಶೇಖರ್ ಆಜಾದ್ ಅವರಂತಹ ಕ್ರಾಂತಿಕಾರಿಗಳು ಪ್ರಜಾಪ್ರಭುತ್ವಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು. ಕೇಂದ್ರಾಡಳಿತ ಪ್ರದೇಶ, ಸಂವಿಧಾನ ನೀಡಿರುವ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ,'' ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. 

ಲಡಾಖ್‌ನ ಜನರ ಧ್ವನಿಯನ್ನು ಬಿಜೆಪಿ ದಮನ ಮಾಡುತ್ತಿದೆ ಮತ್ತು ಪದೇ ಪದೇ ಭರವಸೆ ನೀಡಿದರೂ ಜನರಿಗೆ ಮತದಾನದ ಹಕ್ಕನ್ನು ನಿರಾಕರಿಸಿದೆ ಎಂದು ಆಕ್ರೋಶ ಹೊರಹಾಕಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಇಂದೋರ್ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನಿಗೆ ಕಚ್ಚಿದ ಇಲಿ, ಎಷ್ಟು ಜನರ ಕೆಲಸ ಹೋಯ್ತು ಗೊತ್ತಾ