Select Your Language

Notifications

webdunia
webdunia
webdunia
webdunia

ರೇಡಿಯೋ ಜಾಕಿಯ ಬರ್ಬರ ಹತ್ಯೆ

ರೇಡಿಯೋ ಜಾಕಿಯ ಬರ್ಬರ ಹತ್ಯೆ
ತಿರುವನಂತಪುರಂ , ಮಂಗಳವಾರ, 27 ಮಾರ್ಚ್ 2018 (09:38 IST)
ತಿರುವನಂತಪುರಂ: ಜನಪ್ರಿಯ ರೇಡಿಯೋ ಜಾಕಿ ಒಬ್ಬರನ್ನು ರೇಡಿಯೋ ಸ್ಟೇಷನ್ ಒಳಗೆಯೇ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ನಡೆಸಿರುವ ಘಟನೆ ಕೇರಳದಲ್ಲಿ ನಡೆದಿದೆ. ಮೃತರನ್ನು ರಾಜೇಶ್ ಅಲಿಯಾಸ್ ರಸಿಕನ್ ರಾಜೇಶ್ ಎಂದು ಗುರುತಿಸಲಾಗಿದೆ.
 

ರೆಡ್ ಎಫ್ ಎಂ ಚಾನೆಲ್ ನಲ್ಲಿ ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದ ರಾಜೇಶ್ ಇತ್ತೀಚೆಗೆ ತಮ್ಮದೇ ಸ್ಟುಡಿಯೋ ಕಟ್ಟಿಕೊಂಡಿದ್ದರು. ಮಿಮಿಕ್ರಿ ಕಲಾವಿದರೂ ಆಗಿದ್ದ ರಾಜೇಶ್ ನಿನ್ನೆ ತಡರಾತ್ರಿ ಕಾರ್ಯಕ್ರಮ ಮುಗಿಸಿ ತಮ್ಮ ಪರಿಕರಗಳನ್ನು ಸ್ಟುಡಿಯೋದಲ್ಲಿ ಸ್ನೇಹಿತನೊಂದಿಗೆ ಜೋಡಿಸುತ್ತಿದ್ದಾಗ ಸ್ವಿಫ್ಟ್ ಕಾರಿನಲ್ಲಿ ಬಂದ ದುಷ್ಕರ್ಮಿಗಳು ರಾಜೇಶ್ ಮತ್ತು ಸ್ನೇಹಿತ ಕುಟ್ಟನ್ ಮೇಲೆ ದಾಳಿ ನಡೆಸಿದ್ದಾರೆ.

ಇವರ ಕಿರುಚಾಟ ಕೇಳಿಸಿ ನೆರೆಹೊರೆಯವರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾಗಿದ್ದರೂ ರಾಜೇಶ್ (36) ಬದುಕುಳಿಯಲಿಲ್ಲ. ಗಂಭೀರವಾಗಿ ಗಾಯಗೊಂಡಿರುವ ಸ್ನೇಹಿತನಿಗೆ ಚಿಕಿತ್ಸೆ ಮುಂದುವರಿದಿದೆ. ಮೃತ ರಾಜೇಶ್ ಗೆ ಪತ್ನಿ ಮತ್ತು ಓರ್ವ ಪುತ್ರನಿದ್ದಾನೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಈಶ್ವರಪ್ಪ-ಬಿಎಸ್ ವೈಗೆ ಖಡಕ್ ವಾರ್ನಿಂಗ್ ಕೊಟ್ಟ ಅಮಿತ್ ಶಾ