ನವದೆಹಲಿ : ಸಿಕ್ಕ ಸಿಕ್ಕ ಜಾಗಗಳಲ್ಲಿ ಜನರು ವಾಹನಗಳನ್ನು ಪಾರ್ಕಿಂಗ್ ಮಾಡುವ ಅಭ್ಯಾಸವನ್ನು ಎಂದಿಗೂ ನಿಲ್ಲಿಸುವುದಿಲ್ಲ ಎಂದು ಕಾಣುತ್ತದೆ.
ಆದರೂ ಜನರ ಈ ಉಲ್ಲಂಘನೆಯನ್ನು ನಿಯಂತ್ರಣಕ್ಕೆ ತರಲು ಕೇಂದ್ರ ಹೊಸ ಯೋಜನೆಯನ್ನು ರೂಪಿಸಿದೆ.
ನೋ ಪಾರ್ಕಿಂಗ್ ಪ್ರದೇಶದಲ್ಲಿ ವಾಹನಗಳನ್ನು ನಿಲ್ಲಿಸಿದ ಫೋಟೋಗಳನ್ನು ತೆಗೆದು, ಅದನ್ನು ಶೇರ್ ಮಾಡಿದ್ದಲ್ಲಿ, ಅವರಿಗೆ 500 ರೂ. ಬಹುಮಾನ ಕೊಡುವ ಹೊಸ ಕಾನೂನನ್ನು ತರುವ ಬಗ್ಗೆ ಯೋಜಿಸಿರುವುದಾಗಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಇಂಡಸ್ಟ್ರಿಯಲ್ ಡಿಕಾರ್ಬೋನೈಸೇಶನ್ ಸಮ್ಮಿಟ್ 2022 ಕಾರ್ಯಕ್ರಮದಲ್ಲಿ ಮಾತನಾಡಿದ ಗಡ್ಕರಿ, ನೋ ಪಾರ್ಕಿಂಗ್ ಪ್ರದೇಶದಲ್ಲಿ ವಾಹನ ನಿಲ್ಲಿಸಿದ ವ್ಯಕ್ತಿಗೆ 1,000 ರೂ. ದಂಡ ವಿಧಿಸುವುದರೊಂದಿಗೆ, ಆ ವಾಹನದ ಫೋಟೋವನ್ನು ಕ್ಲಿಕ್ಕಿಸಿದವರಿಗೆ 500 ರೂ. ಬಹುಮಾನ ಕೊಡುವುದಾಗಿ ಹೊಸ ಕಾನೂನನ್ನು ಶೀಘ್ರವೇ ತರುವ ಬಗ್ಗೆ ತಿಳಿಸಿದ್ದಾರೆ.