Webdunia - Bharat's app for daily news and videos

Install App

ಪ್ರಿಯಾಂಕ ಗಾಂಧಿ ಇಂದು ಲೋಕಸಭೆಗೆ ಎಂಟ್ರಿ: ಸಂಸತ್ ನಲ್ಲಿ ಫ್ಯಾಮಿಲಿ ಸಮೇತ ಇರುವವರ ಲಿಸ್ಟ್ ಇಲ್ಲಿದೆ

Krishnaveni K
ಗುರುವಾರ, 28 ನವೆಂಬರ್ 2024 (10:58 IST)
ನವದೆಹಲಿ: ವಯನಾಡಿನಲ್ಲಿ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಭಾರೀ ಅಂತರದಿಂದ ಗೆದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ಇದೇ ಮೊದಲ ಬಾರಿಗೆ ಸಂಸತ್ ಸದಸ್ಯೆಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದರೊಂದಿಗೆ ತಮ್ಮ ರಾಹುಲ್ ಗಾಂಧಿಗೆ ಸಂಸತ್ ನಲ್ಲಿ ಸಾಥ್ ನೀಡಲಿದ್ದಾರೆ.

ಈ ಮೂಲಕ ಈಗ ಗಾಂಧಿ ಪರಿವಾರದ ಎಲ್ಲರೂ ಸಂಸತ್ ನಲ್ಲರುವಂತಾಗಿದೆ. ರಾಹುಲ್ ಗಾಂಧಿ ಲೋಕಸಭೆಯ ವಿಪಕ್ಷ ನಾಯಕನಾದರೆ ಪ್ರಿಯಾಂಕ ಈಗ ಮೊದಲ ಬಾರಿಗೆ ಸಂಸತ್ ಸದಸ್ಯೆಯಾಗಿ ತಮ್ಮನಿಗೆ ಸಾಥ್ ನೀಡಲಿದ್ದಾರೆ. ತಾಯಿ ಸೋನಿಯಾ ಗಾಂಧಿ ರಾಜ್ಯ ಸಭಾ ಸದಸ್ಯರಾಗಿದ್ದಾರೆ. ಆ ಮೂಲಕ ಗಾಂಧಿ ಕುಟುಂಬದ ಎಲ್ಲರೂ ಸಂಸತ್ ನಲ್ಲಿದ್ದಂತಾಗುತ್ತದೆ. ಇವರಲ್ಲದೆ, ಇನ್ನೂ ಕೆಲವರು ಫ್ಯಾಮಿಲಿ ಸಮೇತ ಸಂಸತ್ ಸದಸ್ಯರಾಗಿದ್ದಾರೆ. ಅವರು ಯಾರೆಲ್ಲಾ ಎಂದು ಇಲ್ಲಿದೆ ನೋಡಿ ಲಿಸ್ಟ್.

ಅಖಿಲೇಶ್ ಯಾದವ್-ಡಿಂಪಲ್ ಯಾದವ್: ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಮತ್ತು ಅವರ ಪತ್ನಿ ಡಿಂಪಲ್ ಯಾದವ್ ಇಬ್ಬರೂ ಲೋಕಸಭೆಯ ಸದಸ್ಯರಾಗಿದ್ದಾರೆ. ಅಖಿಲೇಶ್ ಕನೌಜ್ ಕ್ಷೇತ್ರದ ಸಂಸದರಾಗಿದ್ದರೆ ಅವರ ಪತ್ನಿ ಡಿಂಪಲ್ ಮೈನ್ ಪುರಿ ಸಂಸದೆಯಾಗಿದ್ದಾರೆ.

ಶರದ್ ಪವಾರ್-ಸುಪ್ರಿಯಾ ಸುಳೆ: ಹಿರಿಯ ನಾಯಕ ಶರದ್ ಪವಾರ್ ರಾಜ್ಯ ಸಭಾ ಸದಸ್ಯರಾಗಿದ್ದರೆ ಅವರ ಪುತ್ರಿ ಸುಪ್ರಿಯ ಸುಳೆ ಮಹಾರಾಷ್ಟ್ರದ ಬಾರಾಮತಿ ಕ್ಷೇತ್ರದ ಸಂಸದೆಯಾಗಿದ್ದು ಲೋಕಸಭೆಯಲ್ಲಿದ್ದಾರೆ.

ಕನಿಮೊಳಿ-ದಯಾನಿದಿ ಮಾರನ್: ತಮಿಳುನಾಡಿನ ಮಾಜಿ ಸಿಎಂ ದಿವಂಗತ ಕರುಣಾನಿಧಿ ಪುತ್ರಿ ಕನಿಮೊಳಿ ತೂತುಕುಡಿ ಲೋಕಸಭಾ ಕ್ಷೇತ್ರದ ಸಂಸದೆಯಾಗಿದ್ದರೆ  ಮೊಮ್ಮಗ ದಯಾನಿದಿ ಮಾರನ್ ಚೆನ್ನೈ ಸೆಂಟ್ರಲ್ ಕ್ಷೇತ್ರದ ಸಂಸದರಾಗಿ ಲೋಕಸಭೆಯಲ್ಲಿದ್ದಾರೆ.

ಪಿ ಚಿದಂಬರಂ-ಕಾರ್ತಿ ಚಿದಂಬರಂ: ಹಿರಿಯ ಕಾಂಗ್ರೆಸ್ ನಾಯಕ ಪಿ ಚಿದಂಬರಂ ರಾಜ್ಯ ಸಭಾ ಸದಸ್ಯರಾಗಿದ್ದರೆ ಅವರ ಪುತ್ರ ಕಾರ್ತಿ ಚಿದಂಬರಂ ಶಿವಗಂಗಾ ಲೋಕಸಭಾ ಕ್ಷೇತ್ರದ ಸಂಸದರಾಗಿ ಲೋಕಸಭೆಯಲ್ಲಿದ್ದಾರೆ.

ಪಪ್ಪು ಯಾದವ್-ರಂಜೀತ್ ರಂಜನ್: ಬಿಹಾರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪಪ್ಪು ಯಾದವ್ ಲೋಕಸಭೆ ಸದಸ್ಯರಾಗಿದ್ದರೆ ಅವರ ಪತ್ನಿ ರಂಜೀತ್ ರಂಜನ್ ಛತ್ಥೀಸ್ ಘಡದಿಂದ ರಾಜ್ಯಸಭೆಯ ಸದಸ್ಯರಾಗಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments