Select Your Language

Notifications

webdunia
webdunia
webdunia
webdunia

ಪ್ರಿಯಾಂಕಾ ಚೋಪ್ರಾಗೆ ಪ್ರತಿಷ್ಠಿತ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ

ಪ್ರಿಯಾಂಕಾ ಚೋಪ್ರಾಗೆ ಪ್ರತಿಷ್ಠಿತ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ
ಮುಂಬೈ , ಸೋಮವಾರ, 29 ಮೇ 2017 (16:04 IST)
ಮುಂಬೈ:ಬಾಲಿವುಡ್ ನಟಿ ಹಾಗೂ ’ಇಂಟರ್‌ನ್ಯಾಶನಲ್‌ ಐಕಾನ್‌' ಎಂದು ಖ್ಯಾತಿವೆತ್ತಿರುವ ನಟಿ ಪ್ರಿಯಾಂಕಾ ಚೋಪ್ರಾ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. 
 
ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿಗೆ ಹೊಸದಾಗಿ "ಅಂತಾಷ್ಟ್ರೀಯ ಪ್ರಖ್ಯಾತಿ ಪಡೆದಿರುವ ತಾರೆ' ಎಂಬ ವರ್ಗವನ್ನು ಸೇರಿಸಲಾಗಿದ್ದು ಇದರಡಿ "ಬೇ ವಾಚ್‌' ಖ್ಯಾತಿಯ ಪ್ರಿಯಾಂಕಾ ಚೋಪ್ರಾರನ್ನು  ಈ ಪ್ರಶಸ್ತಿಗಾಗಿ ಆಯ್ಕೆಮಾಡಲಾಗಿದೆ. 
 
ಪ್ರಿಯಾಂಕಾ ಅವರ ಕಠಿನ ಹಾಗೂ ಪ್ರಾಮಾಣಿಕ ಪ್ರಯತ್ನದ ಫ‌ಲವಾಗಿ ಆಕೆಗೆ ಅಂತಾರಾಷ್ಟ್ರೀಯ ಸಿನೆಮಾ ವೇದಿಕೆಯಲ್ಲಿ  ಗೌರವದ ಸ್ಥಾನ ಪ್ರಾಪ್ತವಾಗಿದೆ. ಆಕೆ ಜಾಗತಿಕ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ ಮತ್ತು ತನ್ನ ಕಠಿನ ಪರಿಶ್ರಮದ ಮೂಲಕ ಪ್ರತಿಯೋರ್ವ ಭಾರತೀಯ ಹೆಮ್ಮೆ ಪಡುವಂತೆ ಮಾಡಿದ್ದಾರೆ ಎಂದು ದಾದಾ ಫಾಲ್ಕೆ ಅಕಾಡೆಮಿ ಮತ್ತು ಪ್ರಶಸ್ತಿ ಸಮಿತಿ ಅಧ್ಯಕ್ಷ ಗಣೇಶ್‌ ಜೈನ್‌ ತಿಳಿಸಿದ್ದಾರೆ. 
 

Share this Story:

Follow Webdunia kannada

ಮುಂದಿನ ಸುದ್ದಿ

ರೈತ ಸಂಘಟನೆಗಳೇ ಒಂದಾಗಿ ಹೋರಾಟ ಮಾಡಿ: ನಟ ಯಶ್ ಕರೆ