Select Your Language

Notifications

webdunia
webdunia
webdunia
webdunia

ರೈತ ಸಂಘಟನೆಗಳೇ ಒಂದಾಗಿ ಹೋರಾಟ ಮಾಡಿ: ನಟ ಯಶ್ ಕರೆ

ರೈತ ಸಂಘಟನೆಗಳೇ ಒಂದಾಗಿ ಹೋರಾಟ ಮಾಡಿ: ನಟ ಯಶ್ ಕರೆ
ಬೆಂಗಳೂರು , ಸೋಮವಾರ, 29 ಮೇ 2017 (13:15 IST)
ರೈತ ಸಂಘಟನೆಗಳು ಒಂದಾಗಿ ಒಗ್ಗಟ್ಟಿನಿಂದ ಹೋರಾಟ ಮಾಡಿದಾಗ ಮಾತ್ರ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಸಾಧ್ಯ ಎಂದು ಚಿತ್ರನಟ ಯಶ್ ಹೇಳಿದ್ದಾರೆ.
 
ಇಂದು ರೈತ ಸಂಘಟನೆಗಳು ಆಯೋಜಿಸಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಯಶ್, ನಾವು ಒಬ್ಬರಿಗೊಬ್ಬರು ಬೆರಳು ತೋರಿಸುವುದು ಬಿಟ್ಟು ಸಮಸ್ಯೆಗಳನ್ನು ಪರಿಹರಿಸಲು ಒಂದಾಗುವುದು ಅಗತ್ಯ ಮತ್ತು ಅನಿವಾರ್ಯವಾಗಿದೆ ಎಂದರು.
 
ರಾಜ್ಯದಾದ್ಯಂತ ಭೀಕರ ಬರಗಾಲ ಎದುರಾಗಿದ್ದರಿಂದ ಸರಕಾರ ರೈತರ ಸಾಲ ಮನ್ನಾ ಮಾಡುವತ್ತ ಗಮನಹರಿಸಬೇಕು. ರೈತರ ಸಂಕಷ್ಟಗಳತ್ತ ಗಮನಹರಿಸಿ ಪರಿಹಾರ ಕಾರ್ಯಗಳಿಗಾಗಿ ಮುಂದಾಗಬೇಕು ಎಂದು ಮನವಿ ಮಾಡಿದರು.
 
ಮುಂಬರುವ ದಿನಗಳಲ್ಲಿ ಎಲ್ಲಾ ರೈತ ಸಂಘಟನೆಗಳು ಒಂದೇ ವೇದಿಕೆಯಡಿ ಕಾರ್ಯನಿರ್ವಹಿಸುವಂತಾಗಬೇಕು ಎನ್ನುವುದೇ ನಮ್ಮ ಬಯಕೆಯಾಗಿದೆ. ಯಾವುದೇ ರಾಜಕೀಯ ಉದ್ದೇಶವಿಟ್ಟುಕೊಂಡು ರೈತರ ಪರ ಹೋರಾಟ ಮಾಡುತ್ತಿಲ್ಲ ಎಂದು ಚಿತ್ರ ನಟ ಯಶ್ ಸ್ಪಷ್ಟಪಡಿಸಿದ್ದಾರೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಬದುಕಿರುವ ನಟಿಯನ್ನ ಸತ್ತಳೆಂದು ಫೇಸ್ಬುಕ್`ನಲ್ಲಿ ಹರಡಿತ್ತು ಸುಳ್ ಸುದ್ದಿ..!