Select Your Language

Notifications

webdunia
webdunia
webdunia
webdunia

ಬದುಕಿರುವ ನಟಿಯನ್ನ ಸತ್ತಳೆಂದು ಫೇಸ್ಬುಕ್`ನಲ್ಲಿ ಹರಡಿತ್ತು ಸುಳ್ ಸುದ್ದಿ..!

ಬದುಕಿರುವ ನಟಿಯನ್ನ ಸತ್ತಳೆಂದು ಫೇಸ್ಬುಕ್`ನಲ್ಲಿ ಹರಡಿತ್ತು ಸುಳ್ ಸುದ್ದಿ..!
ಮುಂಬೈ , ಭಾನುವಾರ, 28 ಮೇ 2017 (19:52 IST)
ಹಿಂದಿಯ ಖ್ಯಾತ ಕಿರುತೆರೆ ನಟಿ ಶ್ವೇತಾ ತಿವಾರಿ ಬದುಕಿದ್ದಾಗಲೇ ಸತ್ತಿದ್ದಾರೆಂಬ ಸುದ್ಧಿ ಫೇಸ್ಬುಕ್ ನಲ್ಲಿ ಫ್ಯಾನ್ ಪೇಜ್`ನಲ್ಲಿ ಹರಡಿ ಹಲವರು ಶ್ರದ್ಧಾಂಜಲಿ ಅರ್ಪಿಸಿರುವ ಘಟನೆ ನಡೆದಿದೆ. ಕಸೌತಿ ಜಿಂದಗಿ ಧಾರಾವಾಹಿತ ನಟಿ ಇನ್ನಿಲ್ಲ. ಶ್ವೇತಾ ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪೋಸ್ಟ್ ಹಾಕಲಾಗಿದೆ.
 

ಬಳಿಕ ಸುದ್ದಿ ಎಲ್ಲೆಡೆ ಹರಡಿ ಶ್ವೇತಾ ಪತಿ ಅಭಿನವ್ ಕೊಹ್ಲಿ ಮಾಧ್ಯಮಗಳಿಗೆ ಪತ್ನಿ ಜೀವಂತವಾಗಿರುವ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಶ್ವೇತಾ ಜೀವಂತವಾಗಿದ್ದು, ಮಕ್ಕಳ ಜೊತೆ ಕಾಲ ಕಳೆಯುತ್ತಿದ್ದಾರೆ ಎಂದು ಕೊಹ್ಲಿ ತಿಳಿಸಿದ್ದಾರೆ. ಶ್ವೇತಾ ಸಹ ೀ ಸುಳ್ ಸುದ್ದಿ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ದಿಲೀಪ್ ಕುಮಾರ್, ಫರೀದಾ ಜಲಾಲ್ ಸೇರಿದಂತೆ ಹಲವು ನಟರು ಸಾವಿನ ಬಗ್ಗೆ ಸುಳ್ ಸುದ್ದಿ ಹರಡಿದ ಉದಾಹರಣೆಗಳಿವೆ. ಇತ್ತೀಚೆಗೆ ಮಗುವಿಗೆ ಜನ್ಮ ನೀಡಿರುವ ಶ್ವೇತಾ ತಾಯ್ತನದ ಸುಖ ಅನುಭವಿಸುತ್ತಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಜೀ ಕನ್ನಡ ವಾಹಿನಿಯಲ್ಲಿಂದು ದೊಡ್ಮನೆ ಹುಡುಗನ ದರ್ಬಾರ್