ಜೀ ಕನ್ನಡ ವಾಹಿನಿಯಲ್ಲಿಂದು ದೊಡ್ಮನೆ ಹುಡುಗನ ದರ್ಬಾರ್

ಭಾನುವಾರ, 28 ಮೇ 2017 (12:50 IST)
ಬೆಂಗಳೂರು: ಭಾನುವಾರದ ರಜೆಗೆ ಮಜಾ ಕೊಡಲು ಜೀ ಕನ್ನಡ ವಾಹಿನಿಯಲ್ಲಿಂದು ದೊಡ್ಮನೆ ಹುಡುಗರು ಬರಲಿದ್ದಾರೆ. ಅಂದರೆ ಇಂದು ಸಂಜೆ ಪುನೀತ್ ಅಭಿನಯದ ದೊಡ್ಮನೆ ಹುಡುಗ ಸಿನಿಮಾ ಮೊದಲ ಬಾರಿಗೆ ಕಿರು ತೆರೆಯಲ್ಲಿ ಪ್ರಸಾರವಾಗಲಿದೆ.

 
ಪುನೀತ್ ರಾಜ್ ಕುಮಾರ್ ಮತ್ತು ರಾಧಿಕಾ ಪಂಡಿತ್ ಅಭಿನಯದ ಸೂಪರ್ ಹಿಟ್ ಚಿತ್ರ ದೊಡ್ಮನೆ ಹುಡುಗ ಪ್ರಸಾರವಾಗಲಿದೆ. ಇದು ಸಂಜೆ 7.30 ಕ್ಕೆ ಪ್ರಸಾರವಾಗಲಿದೆ.

ಇದರ ಹಾಡುಗಳು ಕೂಡಾ ಸೂಪರ್ ಹಿಟ್ ಆಗಿದ್ದವು. ಕುಟುಂಬದವರಿಗಾಗಿ ತನ್ನ ಜೀವವನ್ನೇ ಪಣಕ್ಕಿಡುವ ಯುವಕನ ಪಾತ್ರದಲ್ಲಿ ಪುನೀತ್ ಅಭಿನಯಿಸಿದ್ದಾರೆ. ಅವರ ಜತೆಗೆ ಭಾರತಿ ವಿಷ್ಣುವರ್ಧನ್, ರವಿಶಂಕರ್, ರಂಗಾಯಣ ರಘು ಮುಂತಾದವರ ದೊಡ್ಡ ತಾರಾ ಬಳಗವೇ ಇದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ರಜನಿಕಾಂತ್ ಹೊಸ ಪಕ್ಷ ಸ್ಥಾಪನೆ ಯಾವಾಗ ಗೊತ್ತಾ?