Select Your Language

Notifications

webdunia
webdunia
webdunia
webdunia

ಟ್ರಂಪ್ ನಮ್ಮ ಪ್ರಧಾನಿ ಮೋದಿಯನ್ನೂ ಹೀಗೇ ಕಿಡ್ನ್ಯಾಪ್ ಮಾಡ್ತಾರಾ: ಕೈ ನಾಯಕ ಪೃಥ್ವಿರಾಜ್ ಚೌಹಾಣ್ ಮತ್ತೆ ವಿವಾದ

Prithviraj Chavan
ಮುಂಬೈ: ವೆನಿಜುವೆಲಾದ ಅಧ್ಯಕ್ಷ ಮಡುರೊನನ್ನು ಅರೆಸ್ಟ್ ಮಾಡಿ ಹೊತ್ತೊಯ್ದಂತೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಮ್ಮ ಪ್ರಧಾನಿ ಮೋದಿಯನ್ನೂ ಕಿಡ್ನ್ಯಾಪ್ ಮಾಡಬಹುದಾ? ಹೀಗಂತ ಮಹಾರಾಷ್ಟ್ರದ ಕಾಂಗ್ರೆಸ್ ನಾಯಕ ಪೃಥ್ವಿರಾಜ್ ಚೌಹಾಣ್ ವಿವಾದಿತ ಹೇಳಿಕೆ ನೀಡಿದ್ದಾರೆ.

ಮೊನ್ನೆಯಷ್ಟೇ ಭಾರತದ ಆಪರೇಷನ್ ಸಿಂಧೂರ್ ವಿಫಲವಾಗಿತ್ತು. ಪಾಕಿಸ್ತಾನ ನಮ್ಮನ್ನು ಸೋಲಿಸಿತ್ತು ಎಂದೆಲ್ಲಾ ಹೇಳಿಕೆ ನೀಡಿದ್ದ ಪೃಥ್ವಿರಾಜ್ ಚೌಹಾಣ್ ಇದೀಗ ಪ್ರಧಾನಿ ಬಗ್ಗೆಯೇ ಕ್ಷುಲ್ಲುಕ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದಾರೆ.

‘ಭಾರತದ ಮೇಲೆ ಅಮೆರಿಕಾ 50% ಸುಂಕ ವಿಧಿಸಿದೆ. ಇದರಿಂದ ಎರಡೂ ದೇಶಗಳ ನಡುವೆ ವ್ಯಾಪಾರ ವಹಿವಾಟು ಅಸಾಧ್ಯವಾಗಿದೆ. ನೇರವಾಗಿ ವ್ಯಾಪಾರ ನಿರ್ಬಂಧ ವಿಧಿಸಲು ಸಾಧ್ಯವಿಲ್ಲ. ಹೀಗಾಗಿ ಈ ರೀತಿ ಪರೋಕ್ಷವಾಗಿ ವ್ಯಾಪಾರಕ್ಕೆ ಅಡ್ಡಿ ಮಾಡಲಾಗುತ್ತಿದೆ. ಈ ಹಿಂದೆ ನಮ್ಮವರು ರಫ್ತು ವ್ಯವಹಾರದಿಂದ ಗಳಿಸುತ್ತಿದ್ದ ಲಾಭ ನಿಂತು ಹೋಗಿದೆ. ಈಗ ನಾವು ಇತರೆ ಮಾರ್ಗಗಳ ಬಗ್ಗೆ ಯೋಚಿಸಬೇಕಿದೆ. ಇಂತಹ ಪ್ರಯತ್ನಗಳು ಈಗಾಗಲೇ ಜಾರಿಯಲ್ಲಿವೆ. ಆದರೆ ಇದರ ನಡುವೆ ವೆನಿಜುವೆಲಾದಲ್ಲಿ ಆದಂತೆ ನಮ್ಮ ದೇಶಕ್ಕೂ ಆಗುತ್ತದಾ? ಟ್ರಂಪ್ ನಮ್ಮ ಪ್ರಧಾನಿಯನ್ನೂ ಕಿಡ್ನ್ಯಾಪ್ ಮಾಡಬಹುದಾ?’ ಎಂದು ಪೃಥ್ವಿರಾಜ್ ಚೌಹಾಣ್ ಪ್ರಶ್ನಿಸಿದ್ದಾರೆ.

ಅವರ ಹೇಳಿಕೆ ಭಾರೀ ಟೀಕೆಗೆ ಗುರಿಯಾಗಿದೆ. ರಾಜಕೀಯ ಏನೇ ಇರಲಿ, ದೇಶ ಎಂದು ಬಂದಾಗ ಅದನ್ನೂ ಮರೆತು ಇಂತಹ ಹೇಳಿಕೆ ನೀಡುತ್ತಿರುವ ಪೃಥ್ವಿರಾಜ್ ಚೌಹಾಣ್ ಬಗ್ಗೆ ಜನ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದರಾಮಯ್ಯರಿಲ್ಲದ ಕಾಂಗ್ರೆಸ್, ಸರ್ಕಾರ ಊಹಿಸಲು ಸಾಧ್ಯವಿಲ್ಲ: ಮಹದೇವಪ್ಪ