Daily Horoscope

Select Your Language

Notifications

webdunia
webdunia
webdunia
webdunia

ಸಿದ್ದರಾಮಯ್ಯರಿಲ್ಲದ ಕಾಂಗ್ರೆಸ್, ಸರ್ಕಾರ ಊಹಿಸಲು ಸಾಧ್ಯವಿಲ್ಲ: ಮಹದೇವಪ್ಪ

CM Siddaramaiah
ಮೈಸೂರು:  ಸಿಎಂ ಕುರ್ಚಿ ಗುದ್ದಾಟದ ನಡುವೆ ಸಿದ್ದರಾಮಯ್ಯ ಇಲ್ಲದಿರುವ ಕಾಂಗ್ರೆಸ್ ಹಾಗು ಸರ್ಕಾರವನ್ನು ಊಹಿಸುವುದೂ ಕಷ್ಟ ಎಂದು ಸಮಾಜಕಲ್ಯಾಣ ಸಚಿವ ಡಾ.ಎಚ್‌ಸಿ ಮಹದೇವಪ್ಪ ಹೇಳಿದರು. 

ಇಲ್ಲಿನ ಸೆನೆಟ್ ಭವನದಲ್ಲಿ ಮಂಗಳವಾರ ವಿಧಾನ ಪರಿಷತ್ ಸದಸ್ಯ ಕೆ. ಶಿವಕುಮಾರ್ ಅವರ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. 

2028ರ ವರೆಗೂ ಅವರೇ ಸಿಎಂ ಆಗಿರುತ್ತಾರೆ. ಯಾವಾಗಲು ಯೋಗ್ಯರ ಕೈಯಲ್ಲಿ ಅಧಿಕಾರ ಇರಬೇಕು. ಜೈಕಾರ ಕೂಗುವವರು ನನ್ನ, ಪರಮೇಶ್ವರ್ ಪರ ಘೋಷಣೆ ಕೂಗಬಹುದು. ಆದರೆ ಇರುವುದೊಂದೇ ಮುಖ್ಯಮಂತ್ರಿ ಹುದ್ದೆ. 2028ರವರೆಗೂ ಸಿದ್ದರಾಮಯ್ಯ ತಮ್ಮ ಅವಧಿ ಪೂರೈಸಲೇ ಬೇಕು.‌ ಇನ್ನೂ ಸಿದ್ದರಾಮಯ್ಯ ಅಧಿಕಾರದಿಂದ ಕೆಳಗಿಳಿದರೆ ಅಹಿಂದ  ಸಮುದಾಯವೇ ಮುಳುಗಲಿದೆ ಎಂದು ಹೇಳಿದರು.

ಈಚೆಗಷ್ಟೇ ಮತ್ತೆ ಮುಖ್ಯಮಂತ್ರಿ ಎಂಬ ನಾಟಕ ನೋಡಿದೆ. ರಾಜಕೀಯ ಗುಂಪುಗಾರಿಕೆಯನ್ನು ಚೆನ್ನಾಗಿ‌ ಬಿಂಬಿಸುತ್ತದೆ. ಸಿದ್ದರಾಮಯ್ಯರಿಗೂ ನಾಟಕ ನೋಡುವಂತೆ ಸಲಹೆ ನೀಡಿದ್ದೇನೆ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಆರ್‌ಎಸ್‌ಎಸ್‌ ಸಂವಿಧಾನಕ್ಕಿಂತ ಮೇಲಲ್ಲ: ಪ್ರಿಯಾಂಕ್ ಖರ್ಗೆ