Publish Date: Tue, 06 Jan 2026 (09:33 IST)
Updated Date: Tue, 06 Jan 2026 (09:38 IST)
ಬೆಂಗಳೂರು: ರಾಜ್ಯದ ಮುಖ್ಯಮಂತ್ರಿಯಾಗಿ ಇಂದು ಸಿದ್ದರಾಮಯ್ಯ ವಿಶಿಷ್ಠ ದಾಖಲೆಯೊಂದನ್ನು ಮಾಡಿದ್ದಾರೆ. ಅತೀ ದೀರ್ಘಾವಧಿಗೆ ಸಿಎಂ ಆದ ದಾಖಲೆ ಮಾಡಿದ್ದಾರೆ.
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಚರ್ಚೆಯಲ್ಲಿರುವಾಗಲೇ ಸಿದ್ದರಾಮಯ್ಯ ಹೊಸ ದಾಖಲೆ ಮಾಡಿದ್ದಾರೆ. ಇಂದಿಗೆ ಸಿದ್ದರಾಮಯ್ಯ 7 ವರ್ಷ 239 ದಿನಗಳ ಕಾಲ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ದಾಖಲೆಯನ್ನು ಮುರಿದಿದ್ದಾರೆ.
ಮೊದಲ ಬಾರಿಗೆ ಸಿಎಂ ಆದಾಗ 2013-2018 ರವರೆಗೆ ಸಿದ್ದರಾಮಯ್ಯ ಒಟ್ಟು 1,829 ದಿನಗಳ ಕಾಲ ಮುಖ್ಯಮಂತ್ರಿಯಾಗಿದ್ದರು. ಎರಡನೇ ಬಾರಿಗೆ ಸಿಎಂ ಆಗಿರುವ ಅವರು ಈಗ 7 ವರ್ಷ 240 ದಿನಗಳನ್ನು ಪೂರೈಸಿ ಮಾಜಿ ಸಿಎಂ ದಿವಂಗತ ದೇವರಾಜ ಅರಸು ದಾಖಲೆಯನ್ನು ಹಿಂದಿಕ್ಕಿದ್ದಾರೆ. ಸಿದ್ದರಾಮಯ್ಯ ಮತ್ತು ದೇವರಾಜ ಅರಸು ಬಿಟ್ಟರೆ ನಿಜಲಿಂಗಪ್ಪ 7 ವರ್ಷ 175 ದಿನ ಮುಖ್ಯಮಂತ್ರಿಯಾಗಿ ಅಧಿಕಾರಲ್ಲಿದ್ದರು. ರಾಮಕೃಷ್ಣ ಹೆಗಡೆ 5 ವರ್ಷ 216 ದಿನ, ಬಿಎಸ್ ಯಡಿಯೂರಪ್ಪ 5 ವರ್ಷ 82 ದಿನಗಳು ಮುಖ್ಯಮಂತ್ರಿಯಾಗಿದ್ದರು.