Select Your Language

Notifications

webdunia
webdunia
webdunia
webdunia

ನೂತನ ರಾಷ್ಟ್ರಪತಿ ಆಯ್ಕೆಗೆ ಇಂದು ಚುನಾವಣೆ

ನೂತನ ರಾಷ್ಟ್ರಪತಿ ಆಯ್ಕೆಗೆ ಇಂದು ಚುನಾವಣೆ
ಬೆಂಗಳೂರು , ಸೋಮವಾರ, 17 ಜುಲೈ 2017 (08:21 IST)
ಪ್ರಣಬ್ ಮುಖರ್ಜಿ ಅವರಿಂದ ತೆರವಾಗಲಿರುವ ರಾಷ್ಟ್ರಪತಿ ಸ್ಥಾನಕ್ಕೆ ಇಂದು ಚುನಾವಣೆ ನಡೆಯುತ್ತಿದೆ. ಎನ್`ಡಿಎ ರಾಮನಾಥ್ ಕೋವಿಂದ್ ಕಣದಲ್ಲಿದ್ದರೆ, ಪ್ರತಿಪಕ್ಷಗಳ ಅಭ್ಯರ್ಥಿಯಾಗಿ ಮೀರಾ ಕುಮಾರ್ ಕಣದಲ್ಲಿದ್ದಾರೆ.

ಬೆಳಗ್ಗೆ 10 ಗಂಟೆಗೆ ಆರಂಭವಾಗಲಿರುವ ಮತದಾನ ಸಂಜೆ 5 ಗಂಟೆವರೆಗೆ ನಡೆಯಲಿದೆ. ಒಟ್ಟು 32 ಮತಕೇಂದ್ರಗಳನ್ನ ಸ್ಥಾಪಿಸಲಾಗಿದ್ದು, ಒಂದು ಕೇಂದ್ರ ದೆಹಲಿಯ ಸಂಸತ್ ಭವನದಲ್ಲಿದ್ದರೆ ಆಯಾ ರಾಜ್ಯಗಳ ವಿಧಾನಸೌಧದಲ್ಲಿ ಒಂದೊಂದು ಮತಕೇಂದ್ರ ಸ್ಥಾಪಿಸಲಾಗಿದೆ. 4120 ಶಾಸಕರು, 543 ಮಂದಿ ಸಂಸದರು, 233 ರಾಜ್ಯಸಭ಻ ಸದಸ್ಯರು ಸೇರಿ 4896 ಮಂದಿ ಮತದಾನ ಮಾಡಲಿದ್ದಾರೆ. ಜುಲೈ 20ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.

ಎನ್`ಡಿಎ ಅಭ್ಯರ್ಥಿ ರಾಮನಾತ್ ಕೋವಿಂದ್`ಗೆ ಹೆಚ್ಚು ಬೆಂಬಲ ಇದೆ ಎಂದು ಹೇಳಲಾಗುತ್ತಿದ್ದು, ಕೋವಿಂದ್ ಶೇ. 62 ರಷ್ಟು ಮತ ಗಳಿಸಿರುವ ನಿರೀಕ್ಷೆಯಲ್ಲಿದ್ದಾರೆ. ಪ್ರತಿಪಕ್ಷಗಳ ಅಭ್ಯರ್ಥಿ ಮೀರಾ ಕುಮಾರ್ ಸಣ್ಣಪುಟ್ಟ ಪಕ್ಷಗಳ ಬೆಂಬಲ ಬೆಂಬಲ ಪಡೆದು ಅನಿರೀಕ್ಷಿತ ಫಲಿತಾಂಶ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಜುಲೈ 24ಕ್ಕೆ ಪ್ರಣಬ್ ಮುಖರ್ಜಿ ಅಧಿಕಾರವದಿ ಅಂತ್ಯಗೊಳ್ಳಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಂಗಾಳದ ಹುಲಿ ಗಂಗೂಲಿ ಕಂಚಿನ ಪ್ರತಿಮೆ ಅನಾವರಣ