Select Your Language

Notifications

webdunia
webdunia
webdunia
webdunia

ಬಂಗಾಳದ ಹುಲಿ ಗಂಗೂಲಿ ಕಂಚಿನ ಪ್ರತಿಮೆ ಅನಾವರಣ

ಸೌರವ್ ಗಂಗೂಲಿ
ಕೋಲ್ಕತ್ತಾ , ಸೋಮವಾರ, 17 ಜುಲೈ 2017 (06:39 IST)
ಕೊಲ್ಕತ್ತಾ:ಬಂಗಾಳದ ಹುಲಿ ಎಂದೇ ಖ್ಯಾತಿ ಪಡೆದಿರುವ ಭಾರತ ಕ್ರಿಕೆಟ್ ತಂಡದ ಯಶಸ್ವಿ ನಾಯಕರಲ್ಲಿ ಒಬ್ಬರಾಗಿರುವ ಸೌರವ್ ಗಂಗೂಲಿ ಅವರ ಕಂಚಿನ ಪ್ರತಿಮೆಯನ್ನು ಅವರ ತವರು ನೆಲದಲ್ಲಿ ಅನಾವರಣಗೊಳಿಸಲಾಯಿತು.
 
ಪಶ್ಚಿಮ ಬಂಗಾಳದ ದಕ್ಷಿಣ ದಿನಾಜ್ ಪುರ ಜಿಲ್ಲೆಯ ಬಿಕಾಶ್ ಮೈದಾನದಲ್ಲಿ ಎಂಟು ಅಡಿ ಎತ್ತರದ ದಾದಾ ಕಂಚಿನ ಪ್ರತಿಮೆ ನಿರ್ಮಾಣಮಾಡಲಾಗಿದೆ. ಈ ಪ್ರತಿಮೆಯನ್ನು ಸ್ವತ: ಗಂಗೂಲಿ ಲೋಕಾರ್ಪಣೆ ಮಾಡಿದರು. ಈ ವೆಳೆ ಅವರ ಅಭಿಮಾನಿಗಳು ದಾದಾ ದಾದಾ ಎಂದು ಜೈಕಾರ ಕೂಗಿ ಸಂಭ್ರಮಿಸಿದರು.
 
ಪ್ರತಿಮೆಯ ಬದಿಯಲ್ಲಿ ನಿಂತು ನಗು ಮುಖದೊಂದಿಗೆ ಫೋಟೋ ತೆಗೆಸಿಕೊಂಡಿರುವ ಗಂಗೂಲಿ, ನನ್ನಂತೆಯೇ ಕಾಣಿಸುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಅಮರನಾಥ್ ಯಾತ್ರೆಗೆ ತೆರಳುತ್ತಿದ್ದ ಬಸ್ ಅಪಘಾತ: 16 ಯಾತ್ರಿಕರ ಸಾವು