Select Your Language

Notifications

webdunia
webdunia
webdunia
webdunia

ಅಮರನಾಥ್ ಯಾತ್ರೆಗೆ ತೆರಳುತ್ತಿದ್ದ ಬಸ್ ಅಪಘಾತ: 16 ಯಾತ್ರಿಕರ ಸಾವು

ಅಮರನಾಥ್ ಯಾತ್ರೆ
ಜಮ್ಮು ಕಾಶ್ಮಿರ , ಭಾನುವಾರ, 16 ಜುಲೈ 2017 (16:33 IST)
ಅಮರನಾಥ್ ಯಾತ್ರೆಗೆ ತೆರಳುತ್ತಿದ್ದ ಬಸ್ ರಾಮಬನ್ ಜಿಲ್ಲೆಯಲ್ಲಿ ಅಪಘಾತಕ್ಕೀಡಾಗಿದ್ದರಿಂದ 16 ಯಾತ್ರಿಕರು ಸಾವನ್ನಪ್ಪಿದ್ದು, 35 ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಭಾರತೀಯ ಸೇನೆ ಕಾರ್ಯಾಚರಣೆಗೆ ಮುಂದಾಗಿದ್ದು ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದೆ. ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 
ಕೆಲ ದಿನಗಳ ಹಿಂದೆ ಅಮರನಾಥ್ ಯಾತ್ರಿಕರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದಾಗ ಎಂಟು ಮಂದಿ ಹತರಾಗಿ ಹಲವಾರು ಪ್ರಯಾಣಿಕರು ಗಾಯಗೊಂಡಿದ್ದು ಸ್ಮರಿಸಬಹುದು.
 
ಖಾಸಗಿ ಬಸ್ ಚಾಲಕ ಸಲೀಂ ತೋರಿದ ಅಪ್ರತಿಮ ಧೈರ್ಯದಿಂದಾಗಿ ಪ್ರಯಾಣಿಕರು ಉಗ್ರರ ಕಪಿಮುಷ್ಠಿಯಿಂದ ಪಾರಾಗಿದ್ದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಕಂದಕಕ್ಕೆ ಉರುಳಿದ ಬಸ್: 11 ಅಮರನಾಥ ಯಾತ್ರಿಕರ ದಾರುಣ ಸಾವು