Publish Date: Tue, 02 Jan 2024 (18:42 IST)
Updated Date: Tue, 02 Jan 2024 (18:59 IST)
ಮಕ್ಕಳಾಗದ ಮಹಿಳೆಯರನ್ನ ಗರ್ಭವತಿ ಮಾಡಿದರೆ 13 ಲಕ್ಷ ರೂ. ನೀಡುವುದಾಗಿ ಪುರುಷರನ್ನು ವಂಚಿಸುತ್ತಿದ್ದ ಸೈಬರ್ ಜಾಲವೊಂದನ್ನು ಬಿಹಾರ ಪೊಲೀಸರು ಭೇದಿಸಿದ್ದಾರೆ. ಆಲ್ ಇಂಡಿಯಾ ಪ್ರೆಗ್ನೆಂಟ್ ಜಾಬ್ ಏಜೆನ್ಸಿ ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದ ವಂಚಕರು, ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಇವುಗಳ ಲಿಂಕ್ ಹಂಚುವ ಮೂಲಕ ಜನರನ್ನು ಸೆಳೆಯುತ್ತಿದ್ದ 8ಜನ ವಂಚಕರನ್ನ ಇದೀಗ ಬಂಧಿಸಲಾಗಿದೆ.