Select Your Language

Notifications

webdunia
webdunia
webdunia
webdunia

ಒಂದೇ ಒಂದು ಸ್ಮಾರ್ಟ್ ಸಿಟಿ ನಿರ್ಮಿಸಿಲ್ಲ: ಮೋದಿ ವಿರುದ್ಧ ನಿತಿಶ್ ಕಿಡಿ

Modi
patna , ಶುಕ್ರವಾರ, 15 ಡಿಸೆಂಬರ್ 2023 (15:11 IST)
ಮೋದಿಯ ಗುಜರಾತ್ ಮಾಡೆಲ್‌ಗೆ ಗುಜರಾತ್ ಜನತೆ ಗುಡ್‌ಬೈ ಹೇಳುವ ಕಾಲ ಸಮಯ ಸನ್ನಿಹಿತವಾಗಿದೆ ಎಂದು ಬಿಹಾರ್ ಮುಖ್ಯಮಂತ್ರಿ ನಿತಿಶ್ ಕುಮಾರ್ ಹೇಳಿದ್ದಾರೆ.
 
ಗುಜರಾತ್ ರಾಜ್ಯದಲ್ಲಿ 20 ವರ್ಷಗಳಿಂದ ಅಧಿಕಾರದಲ್ಲಿದ್ದರೂ ಒಂದೇ ಒಂದು ಸ್ಮಾರ್ಟ್ ಸಿಟಿಯನ್ನು ನಿರ್ಮಿಸದ ಮೋದಿ, ಇದೀಗ ಮುಂಬರುವ ಐದು ವರ್ಷಗಳಲ್ಲಿ ದೇಶಾದ್ಯಂತ 100 ಸ್ಮಾರ್ಟ್ ಸಿಟಿಗಳನ್ನು ನಿರ್ಮಿಸುವುದಾಗಿ ಹೇಳುತ್ತಿದ್ದಾರೆ ಎಂದು  ಲೇವಡಿ ಮಾಡಿದ್ದಾರೆ. 
 
ಚುನಾವಣಾ ಫಲಿತಾಂಶ ಗಮನಿಸಿದಲ್ಲಿ ಬಿಹಾರ್ ಮತ್ತು ದೆಹಲಿಯಲ್ಲಿ ಬಿಜೆಪಿ ಕುಸಿತದತ್ತ ಸಾಗುತ್ತಿದೆ ಎನ್ನುವುದು ಸ್ಪಷ್ಟವಾಗುತ್ತಿದೆ. ಮುಂಬರುವ 2024ರ ಚುನಾವಣೆಗೆ ಬಿಜೆಪಿ ಪಾಲಿಗೆ ಫೈನಲ್‌ನಂತಾಗಿದೆ ಎಂದು ಹೇಳಿದ್ದಾರೆ. ಗುಜರಾತ್ ಮುಖ್ಯಮಂತ್ರಿ  ನೇತೃತ್ವದ ಸರಕಾರ ಶೀಘ್ರದಲ್ಲಿ ಪತನವಾಗಲಿದೆ ಎಂದು ತಿಳಿಸಿದ್ದಾರೆ.
 
ಕೇವಲ ಬಿಹಾರ್ ಮಾತ್ರವಲ್ಲ, ಪ್ರಧಾನಿ ಮೋದಿಯ ತವರು ಕ್ಷೇತ್ರವಾದ ವಾರಣಾಸಿಯಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ  ಬಿಜೆಪಿ ಹೀನಾಯ ಸೋಲು ಕಂಡಿದೆ ಎಂದರು. 
 
ಬಿಹಾರ್ ವಿಧಾನಸಭೆಯಲ್ಲಿ ಬಿಜೆಪಿಯ ಹೀನಾಯ ಸೋಲಿನಿಂದ ಗುಜರಾತ್ ಮಾಡೆಲ್ ಗಿಮಿಕ್ ಅಂತ್ಯವಾದಂತಾಗಿದೆ ಎಂದು  ಬಿಹಾರ್ ಮುಖ್ಯಮಂತ್ರಿ ನಿತಿಶ್ ಕುಮಾರ್  ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಖಾಸಗಿ ಕಂಪನಿ ಟೆಕ್ಕಿ ಮೇಲೆ ರೇಪ್ ಕೇಸ್ ನ ತನಿಖೆ ಶುರು- ಸಿಕೆ ಬಾಬಾ