Select Your Language

Notifications

webdunia
webdunia
webdunia
webdunia

ಪ್ರಧಾನಿ ನರೇಂದ್ರ ಮೋದಿ ಜಗತ್ತಿನ ಪ್ರಭಾವಿ ವ್ಯಕ್ತಿ

Prime Minister Narendra Modi
delhi , ಮಂಗಳವಾರ, 12 ಡಿಸೆಂಬರ್ 2023 (01:00 IST)
ಆನ್'ಲೈನ್ ಮೂಲಕ ನಡೆದ ಮತದಾನ ಪ್ರಕ್ರಿಯೆಯಲ್ಲಿ ಮೋದಿಯವರಿಗೆ ಅಪಾರ ಪ್ರಮಾಣದಲ್ಲಿ ಮತಗಳು ದಕ್ಕಿವೆ. ಹೀಗಾಗಿ 42 ವ್ಯಕ್ತಿಗಳ ಪೈಕಿ ಮೋದಿ ಎಲ್ಲರಿಗಿಂತ ಮುಂದಿದ್ದಾರೆ. ಅಮೇರಿಕಾದ ಅಧ್ಯಕ್ಷ ಜೊಯಿ ಬಿಡೆನ್ ಕೂಡ ಮೋದಿಗಿಂತ ಹಿಂದೆ ಇದ್ದಾರೆ ಎಂಬುದು ಹೆಚ್ಚು ಗಮನಾರ್ಹ.
 
ವಿಶ್ವದ ಖ್ಯಾತ ಆಂಗ್ಲ ಪತ್ರಿಕೆಯಾಗಿರುವ ಟೈಮ್ ಮ್ಯಾಗಜಿನ್ "ವರ್ಷದ ವ್ಯಕ್ತಿ" ಪ್ರಶಸ್ತಿಯನ್ನು ಪ್ರಕಟಿಸಿದೆ. ಜಗತ್ತಿನ ಅತ್ಯಂತ ಪ್ರಭಾವಿಗಳ ಈ ಪಟ್ಟಿಯಲ್ಲಿ ಭಾರತದ ನರೇಂದ್ರ ಮೋದಿ ಪ್ರಥಮ ಸ್ಥಾನದಲ್ಲಿದ್ದು, ಜಗತ್ತಿನ ಅತ್ಯಂತ ಪ್ರಭಾವಿ ವ್ಯಕ್ತಿ ಎಂದು ಗುರ್ತಿಸಿಕೊಂಡಿದ್ದಾರೆ.
 
ಜಗತ್ತಿನಲ್ಲಿ ಅತಿ ಹೆಚ್ಚು ಸುದ್ದಿಯಾಗುತ್ತಿರುವ ವ್ಯಕ್ತಿಗಳನ್ನು ಪಟ್ಟಿ ಮಾಡಿ ಆನ್‌ಲೈನ್ ಮೂಲಕ ಅವರನ್ನು ಮತದಾನದ ಮೂಲಕ ಆಯ್ಕೆ ಮಾಡಿ "ವರ್ಷದ ವ್ಯಕ್ತಿ" ಎಂಬ ಪ್ರಶಸ್ತಿ ನೀಡುತ್ತದೆ.
 
ವಿಶ್ವದ ಅತೀ ದೊಡ್ಡ ಪ್ರಜಾತಂತ್ರ ವ್ಯವಸ್ಥೆಯಲ್ಲಿ  ಸಾಮರ್ಥ್ಯವನ್ನು ಹೊಂದಿರುವ ಸಮರ್ಥ ವ್ಯಕ್ತಿ ನರೇಂದ್ರ ಮೋದಿ ಎಂದು ಟೈಮ್ಸ್ ಮ್ಯಾಗಜೀನ್ ಮೋದಿಯನ್ನು ಬಣ್ಣಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಗರದಲ್ಲಿ ಬೈಕ್ ಕಳ್ಳರ ಹಾವಳಿ