Publish Date: Mon, 18 Dec 2017 (16:18 IST)
Updated Date: Mon, 18 Dec 2017 (16:21 IST)
ನವದೆಹಲಿ: ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಖುಷಿಯಲ್ಲಿರುವ ಪ್ರಧಾನಿ ಮೋದಿಗೆ ನಟ ಪ್ರಕಾಶ್ ರೈ ಅಭಿನಂದನೆ ಸಲ್ಲಿಸಿದ್ದಾರೆ. ಜತೆಗೊಂದು ಒಗ್ಗರಣೆಯನ್ನೂ ಹಾಕಿದ್ದಾರೆ.
ಬಹುಭಾಷಾ ತಾರೆ ಕಳೆದ ಕೆಲವು ದಿನಗಳಿಂದ ಪ್ರಧಾನಿ ಮೋದಿ ಮತ್ತು ಬಿಜೆಪಿಯ ಕೆಲವು ನಾಯಕರ ನೀತಿ ವಿರುದ್ಧ ಕಿಡಿ ಕಾರುತ್ತಲೇ ಇದ್ದರು. ಇದೀಗ ಜಯ ಗಳಿಸಿರುವ ಮೋದಿಗೆ ಅಭಿನಂದನೆ ಸಲ್ಲಿಸಿರುವವ ಪ್ರಕಾಶ್ ರೈ ‘ಆದರೆ ಗೆಲುವು ನಿಜವಾಗಿಯೂ ನಿಮಗೆ ಖುಷಿ ಕೊಟ್ಟಿದೆಯೇ?’ ಎಂದು ಕೆಣಕಿದ್ದಾರೆ.
ಎಲ್ಲಿ ಹೋಯ್ತು ನೀವು ಕೊಚ್ಚಿಕೊಳ್ಳುತ್ತಿದ್ದ 150 ಪ್ಲಸ್ ಸೀಟು? ನೀವು ಕ್ಲೀನ್ ಸ್ವೀಪ್ ಮಾಡಬೇಕಿತ್ತಲ್ಲವೇ? ಎಂದು ಟ್ವಿಟರ್ ಪ್ರಶ್ನಿಸಿರುವ ಪ್ರಕಾಶ್ ರೈ ಅದಕ್ಕೆ ಕೆಲವು ಕಾರಣಗಳನ್ನೂ ಪಟ್ಟಿ ಮಾಡಿದ್ದಾರೆ.
ನಿಮ್ಮ ಈ ಕಡಿಮೆ ಅಂತರದ ಗೆಲುವಿಗೆ ಕಾರಣ, ಜಾತಿ ರಾಜಕಾರಣ ನಡೆಯಲ್ಲ, ನಮ್ಮ ದೇಶದಲ್ಲಿ ಪಾಕಿಸ್ತಾನ, ಜಾತಿ, ಧರ್ಮಕ್ಕಿಂತ ಮಿಗಿಲಾದ ಸಮಸ್ಯೆಗಳಿವೆ, ಬಡವರ ಧ್ವನಿ ಕೊಂಚ ಹೆಚ್ಚಾಗಿದೆ ಎಂದರ್ಥ ಎಂದು ಕುಟುಕಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ