ನವದೆಹಲಿ: ಕೇವಲ ಉಚಿತ ಕೊಡುಗೆಗಳನ್ನು ನೀಡುವುದರಿಂದ ದೇಶದಲ್ಲಿ ಬಡತನ ನಿರ್ಮೂಲನೆ ಆಗುವುದಿಲ್ಲ. ಅದರ ಬದಲು ಉದ್ಯೋಗವನ್ನು ಸೃಷ್ಟಿಸಿದರೆ ಬಡತನವನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂದು ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ ಹೇಳಿದ್ದಾರೆ.
 
									
			
			 
 			
 
 			
					
			        							
								
																	ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಹೊಸ ಉದ್ಯಮಗಳಿಂದ ಉದ್ಯೋಗ ಸೃಷ್ಟಿಯಾಗಿ, ಬೆಳಗ್ಗಿನ ಬಿಸಿಲಿಗೆ ಇಬ್ಬನಿ ಮಾಯವಾದಂತೆ ಬಡತನವೂ ನಿರ್ಮೂಲನೆಯಾಗುತ್ತದೆ ಎಂದು ಹೇಳಿದ್ದಾರೆ.
									
										
								
																	ಈಚೆಗೆ ರಾಜಕೀಯದಲ್ಲಿ ಗೆಲುವು ಸಾಧಿಸಲು ಪಕ್ಷಗಳು ಉಚಿತ ಕೊಡುಗೆಗಳನ್ನು ನೀಡುತ್ತಿರುವ ಬಗ್ಗೆ ಚರ್ಚೆಗಳು ನಡೆಯುತ್ತಿರುವ ವೇಳೆಯೇ ನಾರಾಯಣ ಮೂರ್ತಿ ಅವರ ಈ ಹೇಳಿಕೆ ಮುನ್ನೆಲೆಗೆ ಬಂದಿದೆ.
									
											
							                     
							
							
			        							
								
																	ಉಚಿತ ಕೊಡುಗೆಗಳಿಂದ ಬಡತನ ನಿರ್ಮೂಲನೆ ಆಗುವುದಿಲ್ಲ. ಇದುವರೆಗೂ ಯಾವ ದೇಶವು ಉಚಿತ ಕೊಡುಗೆಯನ್ನು ನೀಡಿ ಬಡತನವನ್ನು ಹೋಗಲಾಡಿಸಿಲ್ಲ ಎಂದು ಹೇಳಿದರು. ಈ ವಿಚಾರವಾಗಿ ಎನ್‌ಡಿಟಿವಿ ವರದಿ ಮಾಡಿದೆ.