Select Your Language

Notifications

webdunia
webdunia
webdunia
webdunia

ಅಶ್ಲೀಲ ವಿಡಿಯೋ ಪ್ರಸಾರ: ಮುಜುಗರಕ್ಕೀಡಾಯಿತು ಬಿಎಸ್ ಎಫ್ ಅಧಿಕಾರಿಗಳ ಸಭೆ

Porn Video Plays
ಅಮೃತಸರ , ಮಂಗಳವಾರ, 13 ಜೂನ್ 2017 (11:57 IST)
ಅಮೃತಸರ: ಬಿಎಸ್ ಎಫ್ ಯೋಧರು ಸೇನಾ ವಿಚಾರಗಳ ಕುರಿತು ಚರ್ಚೆಗಾಗಿ ಏರ್ಪಡಿಸಿದ್ದ ಸಭೆಯಲ್ಲಿ ಅಧಿಕಾರಿಯೊಬ್ಬರ ಲ್ಯಾಪ್ ಟಾಪ್ ನಲ್ಲಿ ಅಶ್ಲೀಲ ಚಿತ್ರದ ವಿಡಿಯೋಗಳು ಪ್ರಸಾರವಾದ ಘಟನೆ ಪಂಜಾಬ್'ನ ಫಿರೋಜ್ಪುರ ಜಿಲ್ಲೆಯಲ್ಲಿರುವ 77 ಬೆಟಾಲಿಯನ್ ಪಡೆ ಮುಖ್ಯ ಕಚೇರಿಯಲ್ಲಿ ನಡೆದಿದೆ. 
 
ಸಭೆಯಲ್ಲಿ ಅಧಿಕಾರಿಯೊಬ್ಬರು ತಮ್ಮ ಲ್ಯಾಪ್ ಟಾಪ್ ಮೂಲಕ ಪ್ರೆಸೆಂಟೇಷನ್ ನೀಡಲು ಮುಂದಾಗಿದ್ದಾರೆ. ಈ ವೇಳೆ ಅಶ್ಲೀಲ ವಿಡಿಯೋಗಳು ಪ್ರಸಾರವಾಗಿದೆ. ಸಭೆಯಲ್ಲಿ 8 ಮಹಿಳಾ ಸಿಬ್ಬಂದಿಗಳೂ ಕೂಡ ಭಾಗಿಯಾಗಿದ್ದರು. ಇದರಿಂದಾಗಿ ಭಾರತೀಯ ಗಡಿ ಭದ್ರತಾ ಸೇನೆ ಮುಜುಗರಕ್ಕೀಡಾಗುವಂತಹ ಪರಿಸ್ಥಿತಿ ಎದುರಾಗಿದೆ. 90 ಸೆಕೆಂಡ್ ಗಳ ಕಾಲ ವಿಡಿಯೋ ಪ್ರಸಾರವಾಗಿದೆ ಎಂದು ತಿಳಿಬಂದಿದೆ. 
 
ಅಶ್ಲೀಲ ವಿಡಿಯೋ ಪ್ರಸಾರವಾಗಿದ್ದನ್ನು ಪಂಜಾಬ್ ಗಡಿಯ ಬಿಎಸ್ಎಫ್ ಐಜಿ ಮುಕುಲ್ ಗೋಯಲ್ ಅವರು ದೃಢಪಡಿಸಿದ್ದು, ತನಿಖೆಗೆ ಆದೇಶಿಸಿದ್ದಾರೆ. ಅಧಿಕಾರಿಯೊಬ್ಬರ ಅಧಿಕೃತ ಲ್ಯಾಪ್ ಟಾಪ್ ನಲ್ಲಿ ಇಂತಹ ಕೆಟ್ಟ ಸಂಗ್ರಹಗಳಿರಬಾರದು. ಪ್ರಕರಣವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದು, ಈಗಾಗಲೇ ತನಿಖೆಗೆ ಆದೇಶಿಸಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ..
 
http://kannada.fantasycricket.webdunia.com/
 
 

Share this Story:

Follow Webdunia kannada

ಮುಂದಿನ ಸುದ್ದಿ

ಸಚಿವೆ ಸ್ಮೃತಿ ಇರಾನಿ ಮೇಲೆ ಬಳೆ ಎಸೆದ ಯುವಕ