Select Your Language

Notifications

webdunia
webdunia
webdunia
Friday, 11 April 2025
webdunia

ಪೋಕ್ಸೊ ನ್ಯಾಯಾಧೀಶ ಶವವಾಗಿ ಪತ್ತೆ!?

ಪೋಕ್ಸೊ
ಭುವನೇಶ್ವರ , ಶನಿವಾರ, 3 ಸೆಪ್ಟಂಬರ್ 2022 (12:06 IST)
ಭುವನೇಶ್ವರ : ಲೈಂಗಿಕ ಅಪರಾಧಗಳಿಂದ ಮಕ್ಕಳ ವಿಶೇಷ ರಕ್ಷಣಾ ಕಾಯ್ದೆ(ಪೋಕ್ಸೊ) ನ್ಯಾಯಾಲಯದ ನ್ಯಾಯಾಧೀಶ ಸುಭಾಶ್ ಕುಮಾರ್ ಬಿಹಾರಿ ಅವರು ಒಡಿಶಾದ ಕಟಕ್ ನಗರದ ತಮ್ಮ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಸುಭಾಶ್ ಕುಮಾರ್ ಬಿಹಾರಿ ಅವರು ತಮ್ಮ ಅಧಿಕೃತ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೇಲ್ನೋಟಕ್ಕೆ ಆತ್ಮಹತ್ಯೆಯಂತೆ ತೋರುತ್ತದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಕಟಕ್ನ ಸಹಾಯಕ ಪೊಲೀಸ್ ಕಮಿಷನರ್ ತಪಸ್ ಚಂದ್ರ ಪ್ರಧಾನ್ ತಿಳಿಸಿದ್ದಾರೆ.

ಬಿಹಾರಿ ಅವರು 2 ದಿನಗಳ ರಜೆಯ ಬಳಿಕ ಶುಕ್ರವಾರ ಕೆಲಸಕ್ಕೆ ಮರಳಬೇಕಿತ್ತು. ಆದರೆ ಅವರು ಶುಕ್ರವಾರವೂ ರಜೆಗಾಗಿ ಅರ್ಜಿ ಸಲ್ಲಿಸಿದ್ದರು.

ಅವರು ಶುಕ್ರವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಅರ್ಜಿಯನ್ನು ಬರೆಯುವಂತೆ ತಿಳಿಸಿದ್ದಾಗಿ ಅವರ ಸ್ಟನೋಗ್ರಾಫರ್ ಆರ್ಎನ್ ಮಹಾಪಾತ್ರ ಅವರು ಪೊಲೀಸರಿಗೆ ತಿಳಿಸಿದ್ದಾರೆ. 


Share this Story:

Follow Webdunia kannada

ಮುಂದಿನ ಸುದ್ದಿ

ಮಠದ ಹಾಸ್ಟೆಲ್‌ನಲ್ಲಿರುವ ವಿದ್ಯಾರ್ಥಿನಿಯರು ಬೇರೆಡೆಗೆ ಶಿಫ್ಟ್‌