Select Your Language

Notifications

webdunia
webdunia
webdunia
webdunia

ಸಂತ್ರಸ್ತೆಯರ ಹೇಳಿಕೆಯ ಮೇಲೆ ಶ್ರೀಗಳ ಭವಿಷ್ಯ ನಿಂತಿದೆ ?

ಸಂತ್ರಸ್ತೆಯರ ಹೇಳಿಕೆಯ ಮೇಲೆ ಶ್ರೀಗಳ ಭವಿಷ್ಯ ನಿಂತಿದೆ ?
ಚಿತ್ರದುರ್ಗ , ಸೋಮವಾರ, 29 ಆಗಸ್ಟ್ 2022 (11:08 IST)
ಚಿತ್ರದುರ್ಗ : ಮುರುಘಾ ಶರಣರ ಮೇಲೆ ಪೋಕ್ಸೊ ಕೇಸ್ ದಾಖಲಾದ ಹಿನ್ನೆಲೆ ಕೋಟೆನಾಡು ಚಿತ್ರದುರ್ಗ ಸದ್ಯ ಭಾರೀ ಸುದ್ದಿಯಲ್ಲಿದೆ.

ಪ್ರಕರಣದ ಸಂತ್ರಸ್ತೆಯರ ಹೇಳಿಕೆಯ ಆಧಾರದ ಮೇಲೆ ಶ್ರೀಗಳ ಮುಂದಿನ ಭವಿಷ್ಯ ನಿರ್ಧಾರವಾಗಲಿದೆ. ಕೋಟೆನಾಡು ಚಿತ್ರದುರ್ಗದ ಮುರುಘಾ ಶರಣರ ವಿರುದ್ಧ ಮೈಸೂರಿನ ನಜರಾಬಾದ್ ಠಾಣೆಯಲ್ಲಿ ದಾಖಲಾಗಿದ್ದ ಪೋಕ್ಸೋ ಪ್ರಕರಣ ಚಿತ್ರದುರ್ಗಕ್ಕೆ ವರ್ಗಾವಣೆಯಾಗಿದೆ.

ಮೈಸೂರಿನಲ್ಲಿ ಹೇಳಿದ್ದ ಹೇಳಿಕೆಯನ್ನೇ ಚಿತ್ರದುರ್ಗದಲ್ಲೂ ನ್ಯಾಯಾಧೀಶರ ಮುಂದೆ ಸಂತ್ರಸ್ತರೆಯರು ಹೇಳಿದ್ರೆ ಡಾ.ಶಿವಮೂರ್ತಿ ಮುರುಘಾ ಶರಣರಿಗೆ ಕಂಟಕ ಫಿಕ್ಸ್ ಆಗುವ ಸಾಧ್ಯತೆ ಇದೆ. ದಲಿತ ಮುಖಂಡರು ಸಹ ಶರಣರ ವಿರುದ್ಧ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಸಹ ಆಗ್ರಹಿಸಿದ್ದಾರೆ.

ಈ ವಿಚಾರ ತಿಳಿದ ಭಕ್ತರು ಹಾಗೂ ವಿವಿಧ ಮಠಗಳ ಮಠಾಧೀಶರು ಮುರುಘಾ ಮಠಕ್ಕೆ ಆಗಮಿಸ್ತಿದ್ದಾರೆ. ಅಲ್ಲದೇ ಶರಣರಿಗೆ ಸಾಂತ್ವನ ಹೇಳುವುದರ ಜೊತೆಗೆ ಕಂಟಕದಿಂದ ಪಾರಾಗಲು ಪ್ಲಾನ್ ಮಾಡ್ತಿದ್ದಾರೆ.    

ಮಾತುಕತೆ ಹಾಗೂ ರಾಜಿ ಸಂಧಾನದೊಂದಿಗೆ ಪ್ರಕರಣದಿಂದ ಪಾರಾಗಲು ಯತ್ನಿಸುತ್ತಿದ್ದಾರೆ. ಸಂತ್ರಸ್ತೆಯರ ಹೇಳಿಕೆ ಮೇಲೆ ಶ್ರೀಗಳ ಭವಿಷ್ಯ ನಿಂತಿದ್ದು, ಶ್ರೀಗಳು ಹಾಗೂ ಇತರೆ ಆರೋಪಿಗಳಿಗೆ ಪೊಲೀಸರಿಂದ ನೋಟಿಸ್ ಜಾರಿ ಸಾಧ್ಯತೆ ಇದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ನೌಕಾಪಡೆಯಿಂದ ಭಾರತೀಯ ಮೀನುಗಾರರ ಬಂಧನ