ನವದೆಹಲಿ: ಪ್ರಧಾನ ಮಂತ್ರಿ ಉಜ್ವಲ್ ಯೋಜನೆಯಡಿ ಉಚಿತ ಗ್ಯಾಸ್ ಸಂಪರ್ಕ ಪಡೆಯಲು ಮತ್ತೊಂದು ಅವಕಾಶ ನೀಡಲಾಗಿದೆ. ಉಜ್ವಲ್ ಯೋಜನೆ 2.0 ಕ್ಕೆ ಅರ್ಜಿ ಸಲ್ಲಿಸಲು ಯಾರು ಅರ್ಹರು, ಹೇಗೆ ಸಲ್ಲಿಕೆ ಮಾಡಬೇಕು ಇಲ್ಲಿದೆ ವಿವರ.
ಮೊದಲ ಹಂತದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಸುಮಾರು 5 ಕೋಟಿ ಮಹಿಳಾ ಸದಸ್ಯರು ಉಜ್ವಲ್ ಯೋಜನೆಯಡಿ ಉಚಿತ ಗ್ಯಾಸ್ ಸಂಪರ್ಕ ಪಡೆದುಕೊಂಡಿದ್ದರು. ಇದೀಗ ಈ ಯೋಜನೆಯನ್ನು ವಿಸ್ತರಿಸಲಾಗಿದೆ. ಈ ಬಾರಿ ಯಾರೆಲ್ಲಾ ಯೋಜನೆಗೆ ಅರ್ಜಿ ಸಲ್ಲಿಸಬಹುದು ಇಲ್ಲಿದೆ ವಿವರ.
ಅರ್ಜಿ ಸಲ್ಲಿಸಲು ಅರ್ಹತೆ
ಭಾರತೀಯ ಮಹಿಳಾ ಪ್ರಜೆಯಾಗಿರಬೇಕು
ಈಗಾಗಲೇ ಇತರೆ ಎಲ್ ಪಿಜಿ ಸಂಪರ್ಕ ಹೊಂದಿರಬಾರದು
18 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಾಗಿರಬೇಕು
ಬಿಪಿಎಲ್ ಕಾರ್ಡ್ ದಾರರಾಗಿರಬೇಕು
ಪರಿಶಿಷ್ಟ ಜಾತಿ/ಪಂಗಡದ ಮಹಿಳೆಯರು ಅರ್ಹರು
ಆರ್ಥಿಕವಾಗಿ ಹಿಂದುಳಿದ ವರ್ಗದವರು ಅರ್ಹರು
ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಫಲಾನುಭವಿಗಳೂ ಅರ್ಹರು
ಏನೆಲ್ಲಾ ದಾಖಲೆಗಳು ಬೇಕು
ಆಧಾರ್ ಕಾರ್ಡ್
ಪಡಿತರ ಚೀಟಿ
ಬ್ಯಾಂಕ್ ಪಾಸ್ ಬುಕ್
ಮೊಬೈಲ್ ನಂಬರ್
ವಾಸಸ್ಥಳ ದೃಢೀಕರಣ
ಪಾಸ್ ಪೋರ್ಟ್ ಸೈಝ್ ಫೋಟೋ
ಅರ್ಜಿ ಸಲ್ಲಿಸುವುದು ಹೇಗೆ
ಆನ್ ಲೈನ್ ಮೂಲಕ https://pmuy.gov.in/ ಎಂಬ ವೆಬ್ ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.ಇಲ್ಲಿ ಕೇಳುವ ಮಾಹಿತಿಗಳನ್ನು ನೀಡಿ ಅಗತ್ಯವಿರುವ ದಾಖಲೆಗಳ ಸ್ಕ್ಯಾನ್ ಕಾಪಿಯನ್ನು ಅಪ್ ಲೋಡ್ ಮಾಡಬೇಕು. ಇದಲ್ಲದೇ ಹೋದರೆ ಎಲ್ ಪಿಜಿ ತುರ್ತು ಸಹಾಯವಾಣಿ ನಂಬರ್ 1906 ಕ್ಕೆ ಕರೆ ಮಾಡಿ ಹೆಚ್ಚಿನ ಮಾಹಿತಿ ಪಡೆಯಬಹುದು.