Select Your Language

Notifications

webdunia
webdunia
webdunia
webdunia

ಜೂನ್ 4 ರಿಂದ ಪ್ರಧಾನಿ ಮೋದಿ ಐದು ರಾಷ್ಟ್ರಗಳ ಪ್ರವಾಸ

ಜೂನ್ 4 ರಿಂದ ಪ್ರಧಾನಿ ಮೋದಿ ಐದು ರಾಷ್ಟ್ರಗಳ ಪ್ರವಾಸ
ನವದೆಹಲಿ , ಭಾನುವಾರ, 29 ಮೇ 2016 (14:31 IST)
ಪ್ರಧಾನಮಂತ್ರಿ ನರೇಂದ್ರ ಮೋದಿ ಎನ್‌ಆರ್‌ಐ ಪ್ರಧಾನಿ ಎಂದು ವಿಪಕ್ಷಗಳು ಟೀಕಿಸುತ್ತಿರುವ ಮಧ್ಯೆಯೇ ಮೋದಿ ಜೂನ್ 4 ರಿಂದ ಐದು ರಾಷ್ಚ್ರಗಳಿಗೆ ಭೇಟಿ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
 
ಅಫ್ಘಾನಿಸ್ತಾನ್, ಕತಾರ್, ಸ್ವಿಟ್ಜರ್‌ಲ್ಯಾಂಡ್, ಅಮೆರಿಕ ಮತ್ತು ಮೆಕ್ಸಿಕೋ ದೇಶಗಳಿಗೆ ಪ್ರಧಾನಿ ಮೋದಿ ಭೇಟಿ ನೀಡಲಿದ್ದಾರೆ ಎಂದು ಪ್ರಧಾನಿ ಕಚೇರಿಯ ಮೂಲಗಳು ತಿಳಿಸಿವೆ. 
 
ಅಫ್ಘಾನಿಸ್ತಾನದಲ್ಲಿ ಭಾರತದ 1400 ಕೋಟಿ ರೂಪಾಯಿಗಳ ಹಣಕಾಸಿನ ನೆರವಿನಿಂದ ನಿರ್ಮಿಸಲಾದ ಸಲ್ಮಾ ಡ್ಯಾಮ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಮೋದಿ ಪಾಲ್ಗೊಳ್ಳಲಿದ್ದಾರೆ. ನಂತರ ಕತಾರ್ ದೇಶಕ್ಕೆ ತೆರಳಲಿದ್ದು ತದನಂತರ ಸ್ವಿಟ್ಜರ್‌ಲ್ಯಾಂಡ್‌ಗೆ ತೆರಳಲಿದ್ದಾರೆ.
 
ಕತಾರ್‌ ದೇಶದಲ್ಲಿ ಎರಡು ದಿನಗಳ ಮೋದಿ, ಕತಾರ್ ದೊರೆ ಶೇಖ್ ತಮೀಮ್ ಬಿನ್ ಹಮದ್ ಅಲ್-ಥಾನಿಯವರನ್ನು ಭೇಟಿ ಮಾಡಿ ಹೈಡ್ರೋಕಾರ್ಬನ್ ಸೆಕ್ಟರ್ ಸೇರಿದಂತೆ ಇತರ ವಿಷಯಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.
 
ಸ್ವಿಟ್ಜರ್‌ಲ್ಯಾಂಡ್‌‌ನಲ್ಲಿ ಸ್ವಿಸ್ ರಾಷ್ಟ್ರಪತಿ ಜೊಹಾನ್ ಸ್ನೈಡರ್ ಅವರೊಂದಿಗೆ ಕಪ್ಪು ಹಣ ಕುರಿತಂತೆ ಚರ್ಚೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಮೂಲಗಳ ಪ್ರಕಾರ, ಉಭಯ ದೇಶಗಳ ನಾಯಕರು ತೆರಿಗೆ ವಿಷಯಕ್ಕೆ ಸಂಬಂಧಿಸಿದಂತೆ ಸೂಕ್ತವಾದ ವೇದಿಕೆ ಕಲ್ಪಿಸಲು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಪ್ರಧಾನಿ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ದೇಶದ ಬರಗಾಲದಿಂದ ತತ್ತರಿಸಿದ್ರೆ ಮೋದಿ ಸರ್ಕಾರ ನೃತ್ಯ, ಹಾಡಗಳಲ್ಲಿ ಬಿಜಿಯಾಗಿದೆ: ರಾಹುಲ್ ಗಾಂಧಿ