Select Your Language

Notifications

webdunia
webdunia
webdunia
webdunia

ದೇಶದ ಬರಗಾಲದಿಂದ ತತ್ತರಿಸಿದ್ರೆ ಮೋದಿ ಸರ್ಕಾರ ನೃತ್ಯ, ಹಾಡಗಳಲ್ಲಿ ಬಿಜಿಯಾಗಿದೆ: ರಾಹುಲ್ ಗಾಂಧಿ

ದೇಶದ ಬರಗಾಲದಿಂದ ತತ್ತರಿಸಿದ್ರೆ ಮೋದಿ ಸರ್ಕಾರ ನೃತ್ಯ, ಹಾಡಗಳಲ್ಲಿ ಬಿಜಿಯಾಗಿದೆ: ರಾಹುಲ್ ಗಾಂಧಿ
ನವದೆಹಲಿ , ಭಾನುವಾರ, 29 ಮೇ 2016 (11:53 IST)
ದೇಶದಲ್ಲಿ ರೈತರು ಬರಗಾಲದಿಂದ ಕಂಗಾಲಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದರೆ ಪ್ರಧಾನಮಂತ್ರಿ ಮೋದಿ ಸರಕಾರ ಹಾಡು, ನೃತ್ಯಗಳೊಂದಿಗೆ ಸಂಭ್ರಮಾಚರಣೆಯಲ್ಲಿ ತೊಡಗಿದೆ ಎಂದು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.  
 
ಪ್ರಧಾನಿ ಮೋದಿ ಸರಕಾರ ಎರಡು ವರ್ಷಗಳ ಅವಧಿ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಸಂಭ್ರಮ ಆಚರಿಸುತ್ತಿದೆ. ದೇಶದಲ್ಲಿ ರೈತರು ಬರಗಾಲದಿಂದ ತತ್ತರಿಸಿ ಕಂಗಾಲಾಗಿದ್ದರೆ, ಮೋದಿ ಸರಕಾರ ಬಾಲಿವುಡ್ ನಟರೊಂದಿಗೆ ನೃತ್ಯ , ಹಾಡುಗಳೊಂದಿಗೆ ಸಂಭ್ರಮ ಆಚರಿಸುತ್ತಿದೆ ಎಂದು ಕಿಡಿಕಾರಿದರು. 
 
ಮಹಾರಾಷ್ಟ್ರದ ವಿಧರ್ಭ ಮತ್ತು ಮರಾಠವಾಡಾದಲ್ಲಿ  ತಮ್ಮನ್ನು ತಾವೇ ಹತ್ಯೆ ಮಾಡಿಕೊಳ್ಳುವಂತಹ ಸ್ಥಿತಿಗೆ ತಲುಪಿದ್ದಾರೆ. ಸಾವಿರಾರು ರೈತರು ಆತ್ಮಹತ್ಯೆಗೆ ಶರಣಾಗಿದ್ದರೆ, ಇಂಡಿಯಾ ಗೇಟ್ ಬಳಿ ಮೋದಿ ಸರಕಾರ ಸಂಭ್ರಮದಲ್ಲಿ ತೊಡಗಿರುವುದು ಹೇಯ ಕೃತ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
 
ಪ್ರಧಾನಿ ಮೋದಿ ಸರಕಾರ ಪ್ರತಿಯೊಂದು ಸಮಯದಲ್ಲೂ ಜನತೆಯನ್ನು ಮೂರ್ಖರನ್ನಾಗಿಸಬಹುದು ಎಂದು ತಿಳಿದುಕೊಂಡಿದೆ. ಆದರೆ, ದೇಶದ ಜನತೆಗೆ ನಿಧಾನವಾಗಿ ಮೋದಿ ಸರಕಾರ ನಡೆಯ ಬಗ್ಗೆ ಅರ್ಥವಾಗುತ್ತಿದೆ. ಕೇವಲ ಸುಳ್ಳು ಭರವಸೆಗಳ ಮೂಲಕ ಜನತೆಯ ಮನ ಗೆಲ್ಲಲು ಸಾಧ್ಯವಿಲ್ಲ ಎನ್ನುವುದು ಮೋದಿ ಸರಕಾರ ಅರಿತರೆ ಒಳ್ಳೆಯದು ಎಂದು ಟಾಂಗ್ ನೀಡಿದ್ದಾರೆ.
 
ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರದ ಗದ್ದುಗೆ ಹಿಡಿಯಲಿದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ಆರೆಸ್ಸೆಸ್ ತರಬೇತಿ ಪಡೆದಿದ್ದರಿಂದ ಬರಿಗೈಯಿಂದಲೇ ಕತ್ತು ಮುರಿಯುತ್ತೇವೆ: ಬಿಜೆಪಿ