Select Your Language

Notifications

webdunia
webdunia
webdunia
webdunia

ಪುಟಿನ್ -ಮೋದಿ ಭೇಟಿ; ಹಲವು ಒಪ್ಪಂದಗಳಿಗೆ ಅಂಕಿತ

ಪುಟಿನ್ -ಮೋದಿ ಭೇಟಿ; ಹಲವು ಒಪ್ಪಂದಗಳಿಗೆ ಅಂಕಿತ
ಪಣಜಿ , ಶನಿವಾರ, 15 ಅಕ್ಟೋಬರ್ 2016 (17:37 IST)
ಬ್ರಿಕ್ಸ್ ಸಮಾವೇಶವನ್ನು ಮುಂದಿಟ್ಟುಕೊಂಡು ಪ್ರಧಾನಿ ಮೋದಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪ್ರತ್ಯೇಕವಾಗಿ ಭೇಟಿಯಾದರು. 

 
ಎರಡು ರಾಷ್ಟ್ರಗಳ ಮುಖ್ಯಸ್ಥರು ಸೇನೆ, ಕೈಗಾರಿಕೆ, ವಿಜ್ಞಾನ, ತಂತ್ರಜ್ಞಾನಗಳಲ್ಲಿ ಸಹಕಾರ ವರ್ಧನೆಗೆ ಸಂಬಂಧಿಸಿದ 16 ಮಹತ್ವದ ಒಪ್ಪಂದಗಳು ಮತ್ತು ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿ ಮೂರು ಪ್ರಕಟಣೆಗಳಿಗೆ ಸಹಿ ಮಾಡಿದವು ಮತ್ತು ವಿಜ್ಞಾನ-ತಂತ್ರಜ್ಞಾನ ಆಯೋಗ ರಚನೆಗೆ ಒಪ್ಪಿಕೊಂಡಿವೆ. 
 
ಭಯೋತ್ಪಾದನೆ ವಿರುದ್ಧ ಹೋರಾಟ, ಆರ್ಥಿಕಾಭಿವೃದ್ಧಿ ಮತ್ತು ರಕ್ಷಣೆ ಸೇರಿ ಅನೇಕ ಒಪ್ಪಂದಗಳ ಬಗ್ಗೆ ಉಭಯ ನಾಯಕರು ಚರ್ಚಿಸುವ ಸಾಧ್ಯತೆಗಳಿವೆ.
 
ಇಂದು ಮುಂಜಾನೆ ಪಣಜಿಗೆ ಬಂದಿಳಿದ ಪುಟಿನ್ ಅವರಿಗೆ ಅದ್ದೂರಿ ಸ್ವಾಗತವನ್ನು ನೀಡಲಾಯಿತು. ಕೇಂದ್ರ ಸಚಿವರಾದ ವಿ.ಕೆ.ಸಿಂಗ್ ಮತ್ತು ಧರ್ಮೇಂದ್ರ ಪ್ರಧಾನ್ ಜಗತ್ತಿನ ಪ್ರಬಲ ರಾಷ್ಟ್ರಗಳೊಂದಾದ ರಷ್ಯಾದ ನಾಯಕನನ್ನು ಆದರದಿಂದ ಸ್ವಾಗತಿಸಿದರು. 
 
ಬ್ರಿಕ್ಸ್ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಗೋವಾಕ್ಕೆ ಹೋಗುತ್ತಿದ್ದ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ವಿಶೇಷ ವಿಮಾನ ಬೆಂಗಳೂರಿನ ಕೇಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತು. ಹವಾಮಾನ ವೈಪರೀತ್ಯವೇ ಇದಕ್ಕೆ ಕಾರಣವೆನ್ನಲಾಗಿದೆ. 
 
ಗೋವಾದಲ್ಲಿ ಮುಂಜಾನೆಯಿಂದ ಮಂಜು ಮುಸುಕಿದ ವಾತಾವರಣವಿದ್ದರಿಂದ ಪುಟಿನ್ ವಿಮಾನ ತುರ್ತು ಭೂಸ್ಪರ್ಶ ಮಾಡಿತು. ಸುಮಾರು 15 ನಿಮಿಷ, ವಿಮಾನ ನಿಲ್ದಾಣದಲ್ಲಿ ನಿಂತಿದ್ದಾಗ ಪುಟಿನ್ ಅದರಲ್ಲಿ ಕುಳಿತಿದ್ದರು. ಬಳಿಕ ವಿಮಾನ ಗೋವಾದತ್ತ ತೆರಳಿದೆ.
 
ಇಂದಿನಿಂದ ಎರಡು ದಿನಗಳ ಕಾಲ ಗೋವಾದ ರಾಜಧಾನಿ ಪಣಜಿಯಲ್ಲಿ ಐದು ರಾಷ್ಟ್ರಗಳನ್ನೊಳಗೊಂಡ 8ನೇ ಬ್ರಿಕ್ಸ್ ಸಮಾವೇಶ ಆರಂಭವಾಗುತ್ತಿದ್ದು,  ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ಆಫ್ರಿಕಾ ದೇಶಗಳು ಪಾಲ್ಗೊಳ್ಳುತ್ತಿವೆ. ರಾಜತಾಂತ್ರಿಕ ಸಂಬಂಧ ವೃತ್ತಿ, ವ್ಯಾಪಾರ ಹಾಗೂ ಹೂಡಿಕೆಯಲ್ಲಿ ಹೆಚ್ಚಳ ಮತ್ತು ಭಯೋತ್ಪಾದನೆ ಸೇರಿದಂತೆ ಅನೇಕ ವಿಷಯಗಳು ಸಮಾವೇಶದಲ್ಲಿ ಚರ್ಚೆಯಾಗುವ ಸಾಧ್ಯತೆಗಳಿವೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಮೋದಿ- ಪುಟಿನ್ ಒಪ್ಪಂದ: ಭಾರತಕ್ಕೆ ಎಸ್-400 ಕ್ಷಿಪಣಿ ಬ್ರಹ್ಮಾಸ್ತ್ರ ನೀಡಲಿರುವ ರಷ್ಯಾ