Select Your Language

Notifications

webdunia
webdunia
webdunia
webdunia

ಮೋದಿ- ಪುಟಿನ್ ಒಪ್ಪಂದ: ಭಾರತಕ್ಕೆ ಎಸ್-400 ಕ್ಷಿಪಣಿ ಬ್ರಹ್ಮಾಸ್ತ್ರ ನೀಡಲಿರುವ ರಷ್ಯಾ

ಮೋದಿ- ಪುಟಿನ್ ಒಪ್ಪಂದ: ಭಾರತಕ್ಕೆ ಎಸ್-400 ಕ್ಷಿಪಣಿ ಬ್ರಹ್ಮಾಸ್ತ್ರ ನೀಡಲಿರುವ ರಷ್ಯಾ
ಗೋವಾ , ಶನಿವಾರ, 15 ಅಕ್ಟೋಬರ್ 2016 (17:17 IST)
ಭಾರತೀಯ ಸೇನೆಗೆ ರಷ್ಯಾ ನಿರ್ಮಿತ ಎಸ್-400 ಬ್ರಹ್ಮಾಸ್ತ್ರ ಸೇರ್ಪಡೆಯಾಗಲಿದ್ದು ಶತ್ರು ರಾಷ್ಟ್ರವಾದ ಪಾಕಿಸ್ತಾನ  ಧೂಳಿಪಟವಾಗಲಿದೆ.
 
ಇಂದು ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮೀರ್ ಪುಟಿನ್ ಎಸ್-400 ಏರ್‌ಡಿಫೆನ್ಸ್ ಮಿಸೈಲ್ ಸಿಸ್ಟಮ್ ಖರೀದಿಗೆ ಬಹು-ಬಿಲಿಯನ್ ಡಾಲರ್ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.  
 
ಬ್ರಿಕ್ಸ್ ಸಭೆಯ ನಂತರ ಉಭಯ ನಾಯಕರು ಒಪ್ಪಂದಕ್ಕೆ ಸಹಿಹಾಕಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
 
ಎಸ್-400 ಏರ್‌ಡಿಫೆನ್ಸ್ ಮಿಸೈಲ್ ಸಿಸ್ಟಮ್ ಮುಂದಿನ ಪೀಳಿಗೆಯ ಆಧುನಿಕ ಮಿಸೈಲ್ ವ್ಯವಸ್ಥೆಯಾಗಿದ್ದು 400 ಕಿ.ಮೀ, 250 ಕಿ.ಮೀ ಮತ್ತು 120 ಕಿ.ಮೀ ದೂರವನ್ನು ಕ್ರಮಿಸುವ ಸಾಮರ್ಥ್ಯ ಹೊಂದಿದೆ.
 
ಯಾವುದೇ ದೇಶ ನಮ್ಮ ದೇಶದ ಮೇಲೆ ವಿಮಾನದಿಂದಾಗಲಿ ಅಥವಾ ಕ್ಷಿಪಣಿಯಿಂದಾಗಲಿ ದಾಳಿ ಮಾಡಿದಲ್ಲಿ ಎಸ್-400 ಮಿಸೈಲ್ ಕೂಡಲೇ 400 ಕಿ.ಮೀ ದೂರದಲ್ಲಿರುವಾಗಲೇ ಗಗನದಲ್ಲಿಯೇ ಉಡಾಯಿಸಿಬಿಡುತ್ತದೆ.
 
ಎಸ್-400 ಮಿಸೈಲ್ ಗಗನದಿಂದ ನಡೆಯುವ ಯಾವುದೇ ದಾಳಿಯನ್ನು ನಿಖರವಾಗಿ ಗುರುತಿಸಿ ಧ್ವಂಸಗೊಳಿಸುವ ಸಾಮರ್ಥ್ಯ ಹೊಂದಿದೆ.
 
ಕೇಂದ್ರ ಸರಕಾರ ಎಸ್-400 ಖರೀದಿಸಲು ರಕ್ಷಣಾ ಸಚಿವಾಲಯ ಅನುಮೋದನೆ ನೀಡಿದ್ದರಿಂದ ಶೀಘ್ರದಲ್ಲಿಯೇ ಬಾರತೀಯ ಸೇನೆಗೆ ಮತ್ತೊಂದು ಬ್ರಹ್ಮಾಸ್ತ್ರ ಸೇರ್ಪಡೆಯಾಗಲಿದೆ.
 
ಎಸ್-400 ಮಿಸೈಲ್ ಏಕಕಾಲದಲ್ಲಿ 36 ಟಾರ್ಗೆಟ್‌ಗಳನ್ನು ಗುರುತಿಸಿ ದಾಳಿ ಮಾಡುತ್ತದೆ. ಗಗನದಲ್ಲಿ ಯಾವುದೇ ಫುಟ್ಬಾಲ್ ರೀತಿಯ ವಸ್ತು ಕಂಡರೂ ಸ್ವಯಂಚಾಲಿತವಾಗಿ ನಿಖರತೆಯಿಂದ ದಾಳಿ ಮಾಡುತ್ತದೆ ಎನ್ನುವುದು ರಕ್ಷಣಾ ತಜ್ಞರ ಅಭಿಪ್ರಾಯವಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ವಾರಣಾಸಿ: ಕಾಲ್ತುಳಿತದಲ್ಲಿ 19 ಕ್ಕೂ ಹೆಚ್ಚು ಭಕ್ತರ ಸಾವು, ಮೋದಿ ಸಂತಾಪ