Select Your Language

Notifications

webdunia
webdunia
webdunia
webdunia

ವಾರಣಾಸಿ: ಕಾಲ್ತುಳಿತದಲ್ಲಿ 19 ಕ್ಕೂ ಹೆಚ್ಚು ಭಕ್ತರ ಸಾವು, ಮೋದಿ ಸಂತಾಪ

ವಾರಣಾಸಿ: ಕಾಲ್ತುಳಿತದಲ್ಲಿ 19 ಕ್ಕೂ ಹೆಚ್ಚು ಭಕ್ತರ ಸಾವು, ಮೋದಿ ಸಂತಾಪ
ವಾರಣಾಸಿ , ಶನಿವಾರ, 15 ಅಕ್ಟೋಬರ್ 2016 (16:36 IST)
ಉತ್ತರಪ್ರದೇಶದ ವಾರಣಾಸಿ ಮತ್ತು ಚಂಡೋಲಿ ಪ್ರದೇಶದ ರಾಜಘಾಟ್‌ ಸೇತುವೆಯಲ್ಲಿ ನಡೆದ ಕಾಲ್ತುಳಿದಲ್ಲಿ ಕನಿಷ್ಠ 19 ಜನರು ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ವರದಿಯಾಗಿದೆ.
 
ಪವಿತ್ರ ನಗರವಾದ ವಾರಣಾಸಿಯ ಬಾಬಾ ಜೈ ಗುರುದೇವ್ ಸಭಾದಲ್ಲಿ ಕಾಲ್ತುಳಿತದಂತಹ ದುರದೃಷ್ಟಕರ ಘಟನೆ ವರದಿಯಾಗಿದೆ.
 
ಧಾರ್ಮಿಕ ನಾಯಕ ಜೈ ಗುರುದೇವ್ ಡೊಮ್ರಿ ಗ್ರಾಮಕ್ಕೆ ಎರಡು ದಿನಗಳ ಶಿಬಿರಕ್ಕಾಗಿ ತೆರಳುತ್ತಿರುವ ಸಂದರ್ಭದಲ್ಲಿ ಸಾವಿರಾರು ಜನ ಭಕ್ತರು ಆಶೀರ್ವಾದ ಪಡೆಯಲು ಮುಂದಾದಾಗ ಕಾಲ್ತುಳಿತ ಉಂಟಾಗಿದೆ ಎಂದು ಮೂಲಗಳು ತಿಳಿಸಿವೆ. 
 
ಜಿಲ್ಲಾಡಳಿತ ಕೂಡಲೇ ಕಾಲ್ತುಳಿತದಲ್ಲಿ ಗಂಭೀರವಾಗಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದ್ದಲ್ಲದೇ ಪರಿಹಾರ ಕಾರ್ಯಗಳನ್ನು ಆರಂಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 
ಘಟನೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ತೀವ್ರ ಶೋಕ ವ್ಯಕ್ತಪಡಿಸಿ, ದೇವರ ಮೃತ ಕುಟುಂಬಗಳಿಗೆ ದುಖಃವನ್ನು ತಡೆದುಕೊಡುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
 
ಉತ್ತರಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮೃತರ ಕುಟುಂಬಗಳಿಗೆ ಎರಡು ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದು, ಗಂಭೀರವಾಗಿ ಗಾಯಗೊಂಡವರಿಗೆ 50 ಸಾವಿರ ರೂಪಾಯಿಗಳ ಪರಿಹಾರ ಘೋಷಿಸಿದ್ದಾರೆ.
 
ಘಟನಾ ಸ್ಥಳಕ್ಕೆ ಪರಿಹಾರ ಕಾರ್ಯ ತಂಡಗಳು ತೆರಳಿದ್ದು, ಮೇಲ್ವಿಚಾರಣೆಯನ್ನು ವಹಿಸಿಕೊಂಡಿವೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಶ್ರೀನಿವಾಸ್ ಪ್ರಸಾದ್ ರಾಜೀನಾಮೆಯಿಂದ ಪಕ್ಷಕ್ಕೆ ಹಾನಿಯಿಲ್ಲ: ರಾಯರೆಡ್ಡಿ