Select Your Language

Notifications

webdunia
webdunia
webdunia
webdunia

ಕೊಚ್ಚಿ ಮೆಟ್ರೋ ರೈಲು ಲೋಕಾರ್ಪಣೆ ಮಾಡಿದ ಪ್ರಧಾನಿ ಮೋದಿ

Prime Minister Narendra Modi
ಕೊಚ್ಚಿ , ಶನಿವಾರ, 17 ಜೂನ್ 2017 (13:04 IST)
ಕೊಚ್ಚಿ: ಕೇರಳದ  ಬಹುನಿರೀಕ್ಷಿತ ಮೊದಲ ಮೆಟ್ರೊ ಲೈನ್ ನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದ್ದಾರೆ. ಈ ಮೂಲಕ ಪ್ರಧಾನಿ ಮೋದಿ ಕೇರಳ ರಾಜ್ಯಪಾಲ ಪಿ ಸದಾಶಿವಂ, ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಹಾಗೂ ಇ.ಶ್ರೀಧರನ್  ಅವರೊಂದಿಗೆ ಮೆಟ್ರೋದಲ್ಲಿ ಸಂಚರಿಸಿದ್ದಾರೆ. 
 
ಕೊಚ್ಚಿಯಲ್ಲಿ ಒಟ್ಟು 25 ಕಿಮೀ ದೂರದ ಮೊದಲ ಹಂತದ ಮೆಟ್ರೋ ಪೈಕಿ 13.2 ಕಿಮೀ ವ್ಯಾಪ್ತಿಯ ರೈಲು ಮಾರ್ಗವನ್ನು ಪ್ರಧಾನಿ ಉದ್ಘಾಟಿಸಿದ್ದಾರೆ. ಪಲರಿವಟ್ಟೊಂ ನಿಂದ ಪಥಡಿಪ್ಪಲಂ ಮೆಟ್ರೋ ನಿಲ್ದಾಣದ ವರೆಗೆ ಪ್ರಧಾನಿ ನರೇಂದ್ರ ಮೋದಿ ಮೆಟ್ರೋದಲ್ಲಿ ಸಂಚರಿಸಿದರು.

ಮೆಟ್ರೋ ಉದ್ಘಾಟನೆ ಮಾಡಿ ಮಾತನಾಡಿದ ಪ್ರಧಾನಿ ಇದು ಭವಿಷ್ಯದ ಅತ್ಯಾಧುನಿಕ ಮೂಲ ಸೌಕರ್ಯವಾಗಿದ್ದು  ಭಾರತದ ಬೆಳವಣಿಗೆಗೆ ಮಹತ್ತರ ಕಾಣಿಕೆ ನೀಡಲಿದೆ ಎಂದು ಹೇಳಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ರಾಷ್ಟ್ರಪತಿ ಹುದ್ದೆಗೆ ಮೋಹನ್ ಭಾಗವತ್ ಸೂಕ್ತ ಎಂದ ಶಿವಸೇನೆ: ರಾಂಗ್ ನಂಬರ್ ಎಂದ ಆರ್ ಎಸ್ ಎಸ್