Select Your Language

Notifications

webdunia
webdunia
webdunia
webdunia

ರಾಷ್ಟ್ರಪತಿ ಹುದ್ದೆಗೆ ಮೋಹನ್ ಭಾಗವತ್ ಸೂಕ್ತ ಎಂದ ಶಿವಸೇನೆ: ರಾಂಗ್ ನಂಬರ್ ಎಂದ ಆರ್ ಎಸ್ ಎಸ್

Shiv Sena
ನವದೆಹಲಿ , ಶನಿವಾರ, 17 ಜೂನ್ 2017 (12:46 IST)
ನವದೆಹಲಿ:ರಾಷ್ಟ್ರಪತಿ ಹುದ್ದೆಗೆ ಮೊಹನ್ ಭಾಗವತ್ ಸೂಕ್ತ ವ್ಯಕ್ತಿ ಎಂದು ಶಿವಸೇನೆ ಹೇಳಿಕೆಗೆ ಪ್ರತಿಕ್ರಿಯಿಸಿರುವ ಆರ್ ಎಸ್ ಎಸ್ ಶಿವಸೇನೆ ರಾಂಗ್ ನಂಬರ್ ಗೆ ಡಯಲ್ ಮಾಡಿದೆ ಎಂದು ಹೇಳಿದೆ.
 
ಭಾಗವತ್ ಮೇಲೆ ಶಿವಸೇನೆ ಇಟ್ಟಿರುವ ನಂಬಿಕೆ ಮತ್ತು ವಿಶ್ವಾಸಕ್ಕೆ ಧನ್ಯವಾದಗಳು. ಆದರೆ ಅದು ರಾಂಗ್ ನಂಬರ್ ಗೆ ಡಯಲ್ ಮಾಡಿದೆ. ಮೋಹನ್ ಭಾಗವತ್ ಅವರ ಅಂತಸ್ತು, ಅವರ ವ್ಯಕ್ತಿತ್ವ ಹಾಗೂ ತಾತ್ವಿಕತೆಗೆ ನಾಗರಿಕ ಮತ್ತು ಸಾಂಸ್ಕೃತಿಕ ಆಯಾಮವಿದೆ. ಅದ್ದರಿಂದ ಮೋಹನ್ ಭಾಗವತ್ ಅಂತಸ್ತಿಗೆ ರಾಷ್ಟ್ರಪತಿ ಹುದ್ದೆ ಸೂಕ್ತವಲ್ಲ. ಅವರು ರಾಷ್ಟ್ರಪತಿ ಹುದ್ದೆಗೆ ಉತ್ತಮ ಆಯ್ಕೆಯಾಗುವುದಿಲ್ಲ ಎಂದು ಆರ್ ಎಸ್ ಎಸ್ ನಾಯಕ ರಾಕೇಶ್ ಸಿನ್ಹಾ ಹೇಳಿದ್ದಾರೆ.
 
ಸ್ವತ: ಭಾಗವತ್ ಈ ಪ್ರಸ್ತಾಪ ತಿರಸ್ಕರಿಸಿದ್ದು, ಅದೊಂದು ಉತ್ತಮ ಮನರಂಜನಾತ್ಮಕ ಸುದ್ದಿ ಎಂದು ಹೇಳಿದ್ದರು ಎಂದು ಸಿನ್ಹಾ ತಿಳಿಸಿದ್ದು, ಅವರ ಈ ಹೇಳಿಕೆ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದೆ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೋನಿಯಾ, ರಾಹುಲ್ ಕಾಂಗ್ರೆಸ್ ಪಕ್ಷದ ಮಾಲೀಕರಲ್ಲ: ಎಚ್.ವಿಶ್ವನಾಥ್