Publish Date: Tue, 15 Aug 2017 (09:27 IST)
Updated Date: Tue, 15 Aug 2017 (09:31 IST)
ನವದೆಹಲಿ: 71 ನೇ ಸ್ವಾತಂತ್ಸ್ಯೋತ್ಸವದ ಅಂಗವಾಗಿ ದೆಹಲಿಯಲ್ಲಿ ಕೆಂಪುಕೋಟೆಯಲ್ಲಿ ಪ್ರಧಾನಿ ಮೋದಿ ಧ್ವಜಾರೋಹಣ ನೆರವೇರಿಸಿದರು.
ನಂತರ ಮಾತನಾಡಿದ ಪ್ರಧಾನಿ ಮೋದಿ ಒಗ್ಗಟ್ಟಾಗಿ ದೇಶದ ಏಳಿಗೆಗಾಗಿ ಕೆಲಸ ಮಾಡೋಣ ಎಂದರು. ತಮ್ಮ ಭಾಷಣದಲ್ಲಿ ಗಡಿಯಲ್ಲಿ ತಗಾದೆ ತೆಗೆಯುತ್ತಿರುವ ಪಾಕಿಸ್ತಾನ, ಚೀನಾಗೆ ಪರೋಕ್ಷವಾಗಿ ತಿರುಗೇಟು ನೀಡಿದರು.
ಸಮುದ್ರ ಭಾಗವಿರಲಿ, ಗಡಿಯಿರಲಿ, ಭಾರತ ತನ್ನನ್ನು ರಕ್ಷಿಸಿಕೊಳ್ಳಲು ಸಮರ್ಥವಾಗಿದೆ ಎಂದರು. ಅಲ್ಲದೆ ಜಮ್ಮು ಕಾಶ್ಮೀರದ ಸಮಸ್ಯೆಗೆ ಅಭಿವೃದ್ಧಿಯೇ ಪರಿಹಾರ ಎಂದರು. ಅಲ್ಲದೆ, ನಂಬಿಕೆಗಳ ಹೆಸರಿನಲ್ಲಿ ಹಿಂಸೆ ಸಹಿಸುವುದಿಲ್ಲ ಎಂದು ಗೋ ರಕ್ಷಣೆ ಹೆಸರಲ್ಲಿ ಹಿಂಸಾಚಾರ ಮಾಡುವವರ ವಿರುದ್ಧ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.