Publish Date: Sat, 12 Oct 2019 (10:10 IST)
Updated Date: Sat, 12 Oct 2019 (10:12 IST)
ಚೆನ್ನೈ: ತಮಿಳುನಾಡಿಗೆ ಬಂದಿರುವ ಚೀನಾ ಅಧ್ಯಕ್ಷ ಕ್ಸಿನ್ ಜಿನ್ ಪಿಂಗ್ ಜತೆಗೆ ನಿನ್ನೆ ದೇವಾಲಯ ಭೇಟಿ ಮಾಡಿದ ಪ್ರಧಾನಿ ಮೋದಿ ಇಂದು ಸ್ಟಾರ್ ಹೋಟೆಲ್ ನಲ್ಲಿ ಔತಣ ಕೂಟ ಬಳಿಕ ಮಾತುಕತೆ ನಡೆಸಲಿದ್ದಾರೆ.
ಚೀನಾ ಅಧ್ಯಕ್ಷರನ್ನು ಸ್ವಾಗತಿಸಲು ಸಾಂಪ್ರದಾಯಿಕ ಉಡುಗೆ ತೊಟ್ಟಿದ್ದ ಮೋದಿ ಇಂದು ಸಾಂಪ್ರದಾಯಿಕ ಔತಣಕೂಟವನ್ನು ಏರ್ಪಡಿಸಲು ಸೂಚಿಸಿದ್ದಾರೆ ಎನ್ನಲಾಗಿದೆ.
ಔತಣ ಕೂಟದ ಬಳಿಕ ಉಭಯ ದೇಶಗಳ ನಿಯೋಗದೊಂದಿಗೆ ಸಭೆ, ಮಾತುಕತೆ ನಡೆಸಲಿದೆ. ಈ ವೇಳೆ ಮಹತ್ವದ ವಿಚಾರಗಳು ಚರ್ಚೆಗೆ ಬರಲಿವೆ ಎನ್ನಲಾಗಿದೆ.