ನವದೆಹಲಿ: ದೀಪಾವಳಿ ಹಬ್ಬದಂದು ಪ್ರಧಾನಿ ಮೋದಿ ಭಾರತೀಯ ಯೋಧರ ಜೊತೆ ಕಾಲ ಕಳೆಯಲಿದ್ದಾರೆ. ಇದಕ್ಕಾಗಿ ಇಂದು ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ನೌಶೆರಾ ಸೆಕ್ಟರ್ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ.
ಪ್ರತೀ ವರ್ಷ ಪ್ರಧಾನಿ ಮೋದಿ ಯೋಧರೊಂದಿಗೆ ದೀಪಾವಳಿ ಹಬ್ಬ ಆಚರಿಸುತ್ತಾರೆ. ಅದೇ ರೀತಿ ಈ ವರ್ಷವೂ ಯೋಧರಿಗೆ ಸಿಹಿ ಹಂಚಿ ಹಬ್ಬ ಆಚರಿಸಲಿದ್ದಾರೆ.
ಗಡಿ ಕಾಯುವ ಯೋಧರಿಗೆ ಸಿಹಿ, ಉಡುಗೊರೆಗಳನ್ನು ನೀಡಲಿದ್ದಾರೆ. 2014 ರಲ್ಲಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದಾಗಿನಿಂದ ಮೋದಿ ಯೋಧರೊಂದಿಗೆ ಈ ವಿಶೇಷ ಕ್ಷಣ ಹಂಚಿಕೊಳ್ಳುತ್ತಿದ್ದಾರೆ.