Select Your Language

Notifications

webdunia
webdunia
webdunia
webdunia

ಕಾಶ್ಮೀರಿ ಯುವತಿಯರ ಜೊತೆ ಯೋಗದ ಬಳಿಕ ಮೋದಿ ಸೆಲ್ಫೀ

Modi selfie

Krishnaveni K

ಶ್ರೀನಗರ , ಶುಕ್ರವಾರ, 21 ಜೂನ್ 2024 (12:42 IST)
Photo Credit: X
ಶ್ರೀನಗರ: ಇಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಪ್ರಧಾನಿ ಮೋದಿ ಶ್ರೀನಗರದ ದಾಲ್ ಸರೋವರದ ತಟದಲ್ಲಿ ಯೋಗ ಮಾಡಿ ಗಮನ ಸೆಳೆದರು. ಈ ವೇಳೆ ಅವರು ಯುವತಿಯರೊಂದಿಗೆ ಸೆಲ್ಫೀ ತೆಗೆದುಕೊಳ್ಳುತ್ತಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮಳೆಯ ಕಾರಣದಿಂದಾಗಿ ಮೋದಿಗೆ ಈ ಬಾರಿ ಸಾವಿರಾರು ಜನರೊಂದಿಗೆ ಯೋಗ ಮಾಡಲು ಸಾಧ್ಯವಾಗಲಿಲ್ಲ. ಶ್ರೀನಗರದಲ್ಲಿ ಇಂದು ಬಿಎಸ್ ಎಫ್ ಯೋಧರು ಸೇರಿದಂತೆ ಸುಮಾರು 7000 ಮಂದಿಯೊಂದಿಗೆ ಇಂದು ಬೆಳ್ಳಂ ಬೆಳಿಗ್ಗೆ ಯೋಗ ಮಾಡಲು ಮೋದಿ ಸಿದ್ಧರಾಗಿದ್ದರು.

ಆದರೆ ಮಳೆ ಬಂದಿದ್ದರಿಂದ ಒಳಾಂಗಣದಲ್ಲಿ ಸೀಮಿತ ಜನರೊಂದಿಗೆ ಯೋಗ ಮಾಡುವಂತಾಯಿತು. ಆದರೆ ಅಷ್ಟಕ್ಕೇ ಮೋದಿ ಸುಮ್ಮನಾಗಲಿಲ್ಲ. ತಮ್ಮ ಜೊತೆ ಯೋಗ ಮಾಡಲೆಂದು ಬಂದ ಹೆಂಗಳೆಯರನ್ನು ಆತ್ಮೀಯವಾಗಿ ಮಾತನಾಡಿಸಿ ತಾವೇ ಮೊಬೈಲ್ ನಲ್ಲಿ ಸೆಲ್ಫೀ ತೆಗೆದು ಸಂಭ್ರಮಿಸಿದ್ದಾರೆ.

ಕಾಶ್ಮೀರ ಭೂಲೋಕದ ಸ್ವರ್ಗ ಎನ್ನಲಾಗುತ್ತದೆ. ಅದರಲ್ಲೂ ಮಳೆ, ಮೋಡ ಕವಿದ ವಾತಾವರಣ ಎಂದರೆ ಕೇಳಬೇಕೇ? ಇಂತಹ ಪ್ರಕೃತಿ ಮಧ್ಯೆ ಮೋದಿ ಕೆಲವು ಹೊತ್ತು ಸಾಮಾನ್ಯ ಜನರೊಂದಿಗೆ ಬೆರೆತು ಕಾಲ ಕಳೆದಿದ್ದಾರೆ. ಈ ಕ್ಷಣಗಳು ಎಲ್ಲರ ಗಮನ ಸೆಳೆಯುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜಾಮೀನು ಸಿಕ್ತು ಎಂದು ಖುಷಿಯಲ್ಲಿದ್ದಾಗಲೇ ಅರವಿಂದ್ ಕೇಜ್ರಿವಾಲ್ ಗೆ ಶಾಕ್ ಕೊಟ್ಟ ಹೈಕೋರ್ಟ್