ನಾನು ಮುಸ್ಲಿಮರ ವಿರೋಧಿಯಲ್ಲ, ನನಗೆ ಮುಸ್ಲಿಮ್ ಸ್ನೇಹಿತರಿದ್ದಾರೆ: ಪ್ರಧಾನಿ ಮೋದಿ

Krishnaveni K
ಬುಧವಾರ, 15 ಮೇ 2024 (11:56 IST)
ನವದೆಹಲಿ: ನಾನು ಮುಸ್ಲಿಮರ ವಿರೋಧಿಯಲ್ಲ, ಮುಸ್ಲಿಮರಲ್ಲೂ ನನಗೆ ಹಲವು ಸ್ನೇಹಿತರಿದ್ದಾರೆ. ನನ್ನ ಬಹುಮಕ್ಕಳನ್ನು ಹೊಂದಿರುವವರು ಹೇಳಿಕೆಯನ್ನು ತಪ್ಪಾಗಿ ಬಿಂಬಿಸಲಾಯಿತು ಎಂದು ಪ್ರಧಾನಿ ಮೋದಿ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಈ ಹಿಂದೆ ಕಾಂಗ್ರೆಸ್ ಪ್ರಣಾಳಿಕೆಯನ್ನು ಟೀಕಿಸುವಾಗ ಮೋದಿ, ಕಾಂಗ್ರೆಸ್ಸಿಗರು ನಿಮ್ಮ ಆಸ್ತಿಯನ್ನು ಕಿತ್ತು ಅಧಿಕ ಮಕ್ಕಳನ್ನು ಹೊಂದಿರುವವರಿಗೆ ಹಂಚುತ್ತಾರೆ ಎಂದಿದ್ದರು. ಅವರ ಈ ಹೇಳಿಕೆ ಮುಸ್ಲಿಮರನ್ನು ಉಲ್ಲೇಖಿಸಿ ನೀಡಲಾಗಿದೆ ಎಂದು ಟೀಕಿಸಲಾಗಿತ್ತು. ಈ ಬಗ್ಗೆ ಇದೀಗ ಮೋದಿ ಸಂದರ್ಶನವೊಂದರಲ್ಲಿ ಸಮರ್ಥನೆ ನೀಡಿದ್ದಾರೆ.

ನನ್ನ ಹೇಳಿಕೆಯನ್ನು ತಪ್ಪಾಗಿ ಬಿಂಬಿಸಲಾಯಿತು. ನಾನು ಬಹು ಮಕ್ಕಳನ್ನು ಹೊಂದಿರುವವರು ಎಂದು ಕೇವಲ ಮುಸ್ಲಿಮರನ್ನು ಉದ್ದೇಶಿಸಿ ಹೇಳಲಿಲ್ಲ. ಬೇರೆ ಧರ್ಮದಲ್ಲೂ ಹೆಚ್ಚು ಮಕ್ಕಳನ್ನು ಹೊಂದಿರುವವರು ಇರುತ್ತಾರೆ. ಬಡತನ ಇರುವವರು ತಮ್ಮ ಸ್ಥಿತಿ ಗತಿ ನೋಡಿಕೊಂಡು ಅದಕ್ಕೆ ತಕ್ಕಷ್ಟು ಮಕ್ಕಳನ್ನು ಹೆರಬೇಕು ಎಂಬ ಅರ್ಥದಲ್ಲಿ ಹೇಳಿದ್ದೆ.

ನಾನು ಮುಸ್ಲಿಮರ ವಿರೋಧಿಯಲ್ಲ. ನಾನು ಚಿಕ್ಕವನಿದ್ದಾಗ ಮುಸ್ಲಿಮರ ಕುಟುಂಬದಿಂದ ಹಬ್ಬದೂಟ ಬರುತ್ತಿತ್ತು. ನನಗೂ ಅನೇಕ ಮುಸ್ಲಿಂ ಸ್ನೇಹಿತರಿದ್ದಾರೆ. ನಾನು ಹಿಂದೂ-ಮುಸ್ಲಿಂ ಎಂದು ಬೇಧ ಮಾಡುತ್ತಿದ್ದರೆ ಇಷ್ಟು ವರ್ಷ ಸಾರ್ವಜನಿಕ ಜೀವದಲ್ಲಿ ಇರಲು ಸಾಧ‍್ಯವಾಗುತ್ತಿರಲಿಲ್ಲ. ಗೋದ್ರಾ ಗಲಭೆ ನಂತರ ಮುಸ್ಲಿಮರಿಗೆ ನನ್ನ ವಿರುದ್ಧ ಭಾವನೆ ಬರುವಂತೆ ಮಾಡಲಾಯಿತು ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವಾಚ್ ಬಗ್ಗೆ ಪ್ರಶ್ನಿಸುವವರು ಐಟಿ ಇಲಾಖೆಯಿಂದ ಏಕೆ ತನಿಖೆ ನಡೆಸಬಾರದು

ಪರಪ್ಪನ ಅಗ್ರಹಾರ ಕೈದಿಗಳ ಚಟ ತೀರಿಸಲು ಹೋಗಿ ಅರೆಸ್ಟ್ ಆದ ವಾರ್ಡನ್

Delhi Air Pollution, ರೇಖಾ ಗುಪ್ತಾ ಈ ಬಗ್ಗೆ ಮಹತ್ವದ ಹೇಳಿಕೆ

ಆದಿಚುಂಚನಗಿರಿ ಸ್ವಾಮೀಜಿಗಳ ಸಮ್ಮುಖದಲ್ಲೇ ಕ್ಷಮೆಯಾಚಿಸಿದ ಎಚ್‌ಡಿ ಕುಮಾರಸ್ವಾಮಿ

ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಬಾಬ್ರಿ ಮಸೀದಿ ನಿರ್ಮಾಣಕ್ಕೆ ಕಬೀರ್ ಅಡಿಪಾಯ

ಮುಂದಿನ ಸುದ್ದಿ
Show comments