Daily Horoscope

Select Your Language

Notifications

webdunia
webdunia
webdunia
webdunia

ವಿದೇಶ ಪ್ರವಾಸ ಮೇಲೆ ಹೆಚ್ಚುವರಿ ತೆರಿಗೆನಾ: ಪ್ರಧಾನಿ ಮೋದಿ ಗರಂ

Modi BJP
ನವದೆಹಲಿ: ವಿದೇಶ ಪ್ರವಾಸ ಮಾಡುವವರ ಮೇಲೆ ಹೆಚ್ಚುವರಿ ಸೆಸ್ ಮತ್ತು ತೆರಿಗೆ ವಿಧಿಸಲಾಗುತ್ತದೆ ಎಂಬ ಮಾಧ್ಯಮ  ವರದಿಯ ಬಗ್ಗೆ ಪ್ರಧಾನಿ ಮೋದಿ ಗರಂ ಆಗಿದ್ದಾರೆ.

ಇತ್ತೀಚೆಗೆ ಪ್ರಧಾನಿ ಮೋದಿ ವಿದೇಶ ಪ್ರವಾಸಕ್ಕೆ ಕಡಿವಾಣ ಹಾಕಿ, ಇಂಧನ ಕಡಿಮೆ ಬಳಸಿ, ಚಿನ್ನ ಖರೀದಿ ಮಾಡಬೇಡಿ ಎಂದು ಕರೆ ನೀಡಿದ್ದರು. ಇದರ ಬೆನ್ನಲ್ಲೇ ವಿದೇಶ ಪ್ರವಾಶಕ್ಕೆ ಹೆಚ್ಚುವರಿ ತೆರಿಗೆ ವಿಧಿಸಲಾಗುತ್ತದೆ ಎಂಬ ಸುದ್ದಿ ಹಬ್ಬಿತ್ತು.

 ಈ ಬಗ್ಗೆ ಸ್ವತಃ ಪ್ರಧಾನಿ ಮೋದಿ ಪ್ರತಿಕ್ರಿಯಿಸಿದ್ದು ಈ ಸುದ್ದಿಗಳಲ್ಲಿ ಸಾಸಿವೆ ಕಾಳಿನಷ್ಟೂ ಸತ್ಯವಿಲ್ಲ ಎಂದಿದ್ದಾರೆ. ಸ್ವತಃ ಪ್ರಧಾನಿ ಮೋದಿಯೇ ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತಿದ್ದಂತೇ ಆ ಮಾಧ್ಯಮ ಸುದ್ದಿಯನ್ನು ಅಳಿಸಿ ಹಾಕಿದೆ.

ವಿದೇಶ ಪ್ರವಾಸದ ಮೇಲೆ ನಿರ್ಬಂಧ ವಿಧಿಸುವ ಯಾವುದೇ ಪ್ರಸ್ತಾವನೆಯೂ ನಮ್ಮ ಮುಂದಿಲ್ಲ. ಜನರ ಜೀವನ ಸುಲಭಗೊಳಿಸುವುದು ಮತ್ತು ವ್ಯವಹಾರ ಸುಗಮಗೊಳಿಸುವುದೇ ನಮ್ಮ ಸರ್ಕಾರದ ಆದ್ಯತೆಯಾಗಿದೆ. ಈ ಬಗ್ಗೆ ಬಂದಿರುವ ಮಾಧ್ಯಮ ವರದಿಯು ಸಂಪೂರ್ಣ ಸುಳ್ಳಾಗಿದೆ ಎಂದು ಮೋದಿ ಹೇಳಿದ್ದಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಢಿಕ್ಕಿ ಹೊಡೆದಿದ್ಯಾಕೆ ಎಂದು ಕೆನ್ನೆಗೆ ಹೊಡೆದ ಯುವತಿ: ಯುವಕ ಮಾಡಿದ್ದೇನು ನೋಡಿ Video