Select Your Language

Notifications

webdunia
webdunia
webdunia
webdunia

ನೆಹರೂ ಭಾಷಣ ಉಲ್ಲೇಖಿಸಿದ ಪ್ರಧಾನಿ ಮೋದಿ

ಧಾನಿ ಮೋದಿ

geetha

ನವದೆಹಲಿ , ಮಂಗಳವಾರ, 6 ಫೆಬ್ರವರಿ 2024 (17:01 IST)
ನವದೆಹಲಿ :ಪ್ರಧಾನಿ ಮೋದಿ ಅವರ ಹೇಳಿಕೆ ಹೊರಬೀಳುತ್ತಿದ್ದಂತೆಯೇ ನೆಹರೂ ಅವರ ಭಾಷಣದ ತುಣಕೂ ಸಹ ಸಾಮಾಜಿಕ ಜಾಲತಾಣಗಳಲ್ಲಿ ಹೊರಬಿದ್ದಿದೆ. ನೆಹರೂ ಭಾಷಣದ ತುಣಕಿನಲ್ಲಿರುವ ಹೇಳಿಕೆ ಹೀಗಿದೆ.  ಹೆಚ್ಚಿನ ಪರಿಶ್ರಮದ‌ ಕೆಲಸಗಳನ್ನು ಮಾಡಲು ನಮ್ಮ ಕೈಯಲ್ಲಿ ಸಾಧ್ಯವಿಲ್ಲ. ನಾವು ಅಷ್ಟಾಗಿ ಕೆಲಸ ಮಾಡಲೂ  ಸಹ ಸಾಧ್ಯವಿಲ್ಲ. ಆದರೆ ಯೂರೋಪ್‌ ನ ಜನರು, ಜಪಾನ್‌ ಜನರು, ಚೀನಾದ ಜನರು ಅಥವಾ ಅಮೆರಿಕ ಜನರು ಹೆಚ್ಚಿನ ಕೆಲಸ ಮಾಡಬಲ್ಲರು. ಇವೆಲ್ಲವೂ ಯಾವುದೇ ಜಾದೂವಿನಿಂದ ಅವರು ಮಾಡಿದ್ದಾರೆಂದು ಭಾವಿಸಬೇಡಿ. ಅವರು ಪರಿಶ್ರಮ ಮತ್ತು ಬುದ್ದಿಶಕ್ತಿಯಿಂದ ಸಾಧಿಸಿದ್ದಾರೆ. ನಾವೂ ಸಹ ಪರಿಶ್ರಮ ಮತ್ತು ಬುದ್ದಿಯಿಂದ ಅದನ್ನು ಸಾಧಿಸಬಹುದು. 

ಪ್ರಧಾನಿ ನರೇಂದ್ರ ಮೋದಿ ಸೋಮವಾರ ಲೋಕಸಭೆಯಲ್ಲಿ ಭಾಷಣ ಮಾಡುವ ವೇಳೆ ಮಾಜಿ ಪ್ರಧಾನಿ ಜವಹರಲಾಲ್‌ ನೆಹರೂ ಅವರ ಹೇಳಿಕೆಯೊಂದನ್ನು ಉಲ್ಲೇಖಿಸಿರುವುದು ವಿವಾದವೆಬ್ಬಿಸಿದೆ. ಭಾರತೀಯರು ಸೋಮಾರಿಗಳು ಹಾಗೂ ಕಡಿಮೆ ಬುದ್ದಿಮತ್ತೆಯುಳ್ಳವರು ಎಂದು ನೆಹರೂ ಅವರು ಭಾವಿಸಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ಭಾಷಣವನ್ನು ಉಲ್ಲೇಖಿಸಿರುವ ಪ್ರಧಾನಿ ಮೋದಿ, ಕಾಂಗ್ರೆಸ್‌ ಯಾವತ್ತಿಗೂ ದೇಶದ ಜನರ ಮೇಲೆ ನಂಬಿಕೆಯಿಟ್ಟಿರಲಿಲ್ಲ. ಅದು ತನ್ನನ್ನು ಆಳುವ ವರ್ಗವೆಂದೂ ಮಿಕ್ಕವರನ್ನು ಕೆಳವರ್ಗವೆಂದೂ ಭಾವಿಸಿತ್ತು ಎಂದಿದ್ದಾರೆ.  

Share this Story:

Follow Webdunia kannada

ಮುಂದಿನ ಸುದ್ದಿ

ದನಕರುಗಳೊಂದಿಗೆ ಬೀದಿಗಿಳಿದ ಬಿಜೆಪಿ ಕಾರ್ಯಕರ್ತರು