Select Your Language

Notifications

webdunia
webdunia
webdunia
webdunia

ದನಕರುಗಳೊಂದಿಗೆ ಬೀದಿಗಿಳಿದ ಬಿಜೆಪಿ ಕಾರ್ಯಕರ್ತರು

bjp protest
ಬೆಂಗಳೂರು :  ಬಿಜೆಪಿ ಪ್ರತಿಭಟನೆಗೆ ಹಸು ಮತ್ತು ಕರುಗಳನ್ನು ಕರೆತಂದಿರುವುದನ್ನು ಆಕ್ಷೇಪಿಸಿದ ಪ್ರಾಣಿಪ್ರಿಯರು ಈ ಬಗ್ಗೆ ಬಿಜೆಪಿ ಕಾರ್ಯಕರ್ತರೊಂದಿಗೆ ವಾಗ್ವಾದ ನಡೆಸಿದ್ದಾರೆ. ಪಶುಪಾಲಕರು ಮತ್ತು ರೈತರಿಗೆ ಸಹಾಯಧನ ನೀಡಬೇಕೆಂದು ಒತ್ತಾಯಿಸಿ ಕಾಂಗ್ರೆಸ್‌ ವಿರುದ್ದ ಬಿಜೆಪಿ ನಡೆಸುತ್ತಿದ್ದ ಪ್ರತಿಭಟನೆಯ ವಿರುದ್ದ ಮತ್ತೊಂದು ಪ್ರತಿಭಟನೆ ನಡೆಸಿರುವ ವಿಚಿತ್ರ ಸಂಗತಿ ಮಂಗಳವಾರ ಫ್ರೀಡಂ ಪಾರ್ಕ್‌ ನಲ್ಲಿ ನಡೆದಿದೆ.

ಈ ವೇಳೆ ಮಾತಿನ ಚಕಮಕಿ ಮಾತ್ರವದಲ್ಲದೇ ತಳ್ಳಾಟ ಕಿರುಚಾಟಗಳೂ ಸಹ ನಡೆದಿದೆ.ಸ್ಥಳಕ್ಕೆ‌ ಆಗಮಿಸಿದ ಮಾನವ ಹಕ್ಕುಗಳ ಸಂರಕ್ಷಣೆ ಮತ್ತು ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆಯವರು ಪ್ರಾಣಿಗಳನ್ನು ಪ್ರತಿಭಟನೆಗೆ ಬಳಸುತ್ತಿರುವುದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ರೊಚ್ಚಿಗೆದ್ದ  ರೈತರು ಮತ್ತು ಪ್ರತಿಭಟನಾಕಾರರು ಅವರನ್ನು ಸ್ಥಳದಿಂದ ತಳ್ಳಾಡಿ ಓಡಿಸಿಬಿಟ್ಟರು. 
 

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಆಹ್ವಾನಕ್ಕೆ ವಿಜಯೇಂದ್ರ ತಿರುಗೇಟು!