ಇಂದು ನೊಬೆಲ್ ಪ್ರಶಸ್ತಿ ವಿಜೇತ ಕವಿ ರವೀಂದ್ರನಾಥ ಠಾಗೋರ್ ಅವರ 155ನೇಯ ಜನ್ಮದಿನವಾಗಿದ್ದು ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರಕವಿಗೆ ಗೌರವ ವಂದನೆ ಸಲ್ಲಿಸಿದ್ದಾರೆ.
"ಗುರೂಜಿ ಠಾಗೋರ್ ಅವರ ಜನ್ಮದಿನವಾದ ಇಂದು ನಾನು ಅವರಿಗೆ ತಲೆಬಾಗುತ್ತೇನೆ. ಬಹುಮುಖ ವ್ಯಕ್ತಿತ್ವದ ಅವರ ಆಳವಾದ ಆಲೋಚನೆಗಳು ಮತ್ತು ಬರಹಗಳು ಸದಾಕಾಲಕ್ಕೂ ಸ್ಪೂರ್ತಿದಾಯಕ,"ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
7 ಮೇ, 1861 ರಂದು ಜನಿಸಿದ್ದ ಠಾಗೋರ್ 7 ಆಗಸ್ಟ್ 1941ರಲ್ಲಿ ಕೊನೆಯುಸಿರೆಳೆದಿದ್ದರು. ಗುರುದೇವ ಎಂಬ ಅಂಕಿತನಾಮದಲ್ಲಿ ಬರೆಯುತ್ತಿದ್ದ ಅವರು ಅವರು ಮಹಾ ವಿದ್ವಾಂಸ, ಕವಿಗಳಾಗಿ, ಕಾದಂಬರಿಕಾರರಾಗಿ, ಸಂಗೀತಕಾರರಾಗಿ ಮತ್ತು ನಾಟಕರಾಗಿ ಗುರುತಿಸಿಕೊಂಡಿದ್ದಾರೆ.
'ಗೀತಾಂಜಲಿ' ಕಾವ್ಯಕ್ಕೆ 1913ರಲ್ಲಿ ಅವರಿಗೆ ನೊಬೆಲ್ ಸಾಹಿತ್ಯ ಪ್ರಶಸ್ತಿ ದಕ್ಕಿತು. ಈ ಮೂಲಕ ಅವರು ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ಏಷ್ಯಾದ ಮೊದಲಿಗರು ಎಂಬ ಹೆಗ್ಗಳಿಕೆ ಅವರದು.