ಅಂತಾರಾಷ್ಟ್ರೀಯ ಯೋಗ ದಿನಾಚರಣೆ: ವಿಶಾಖಪಟ್ಟಣದಲ್ಲಿ ಮೋದಿ ಯೋಗ

Krishnaveni K
ಶನಿವಾರ, 21 ಜೂನ್ 2025 (08:47 IST)
ವಿಶಾಖಪಟ್ಟಣ: ಇಂದು ಅಂತಾರಾಷ್ಟ್ರೀಯ ಯೋಗ ದಿನವಾಗಿದ್ದು, ವಿಶಾಖಪಟ್ಟಣಂನಲ್ಲಿ ಪ್ರಧಾನಿ ಮೋದಿ ಯೋಗ ಮಾಡಿದ್ದಾರೆ. ವಿಶಾಖಪಟ್ಟಣಂನ ಆರ್ ಕೆ ಬೀಚ್ ಬಳಿ ನಡೆದ ಯೋಗ ದಿನಾಚರಣೆಯಲ್ಲಿ ಅವರು ಪಾಲ್ಗೊಂಡಿದ್ದಾರೆ.

ಪ್ರತೀ ವರ್ಷ ಒಂದೊಂದು ರಾಜ್ಯದಲ್ಲಿ ಪ್ರಧಾನಿ ಮೋದಿ ಯೋಗ  ದಿನಾಚರಣೆಯಲ್ಲಿ ಪಾಲ್ಗೊಂಡು ಯೋಗ ಮಾಡುತ್ತಾರೆ. ಈ ಬಾರಿ ವಿಶಾಖಪಟ್ಟಣಂನಲ್ಲಿ ಭಾಗಿಯಾಗಿದ್ದಾರೆ. ಆರ್ ಕೆ ಬೀಚ್ ನಿಂದ ಭೋಗಪುರಂವರೆಗೆ 26 ಕಿ.ಮೀ. ವ್ಯಾಪ್ತಿಯಲ್ಲಿ ಸುಮಾರು 3 ಲಕ್ಷ ಜನ ಭಾಗಿಯಾದ ಬೃಹತ್ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಭಾಗಿಯಾದರು.

ಒಂದು ಭೂಮಿ ಒಂದು ಆರೋಗ್ಯ ಶೀರ್ಷಿಕೆಯಲ್ಲಿ ಯೋಗ ದಿನಾಚರಣೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಯೋಗ ಕೇವಲ ಒಬ್ಬರಿಗಾಗಿ ಅಲ್ಲ, ಇಡೀ ಮಾನವ ಕುಲದ ಒಳಿತಿಗಾಗಿ ಎಂದಿದ್ದಾರೆ. ಮಾನವತತೆಯ ಪ್ರತೀಕವಾಗಿ ಯೋಗವನ್ನು ಆಚರಿಸೋಣ.

ಯೋಗ ಇಂದು ಜನರ ಜೀವನದ ಭಾಗವಾಗಿದೆ. ಆಂತರಿಕ ನೆಮ್ಮದಿಗಾಗಿ ಯೋಗ ಅಗತ್ಯವಾಗಿದೆ. ಯೋಗ ವಯಸ್ಸು, ವರ್ಗ, ಗಡಿಗಳನ್ನು ಮೀರಿದ್ದಾಗಿದೆ ಎಂದು ಪ್ರಧಾನಿ ಮೋದಿ ಈ  ವೇಳೆ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬೆಸ್ಟ್ ಫಿನ್ಟೆಕ್ ಇನ್ಶುರೆನ್ಸ್ ಅವಾರ್ಡ್ ಪಡೆದ ಡಿಜಿಟ್ ಇನ್ಶುರೆನ್ಸ್

ಗರ್ಭಿಣಿಯರು ಮಲಬದ್ಧತೆಯಾದರೆ ಏನು ಮಾಡಬೇಕು

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

Arecanut Price: ಅಡಿಕೆ, ಕೊಬ್ಬರಿ ಇಂದಿನ ಬೆಲೆ ಇಲ್ಲಿದೆ

ಭಾರತಕ್ಕೆ ಈಗ ಯಾರೂ ಫ್ರೆಂಡ್ಸ್ ಇಲ್ಲ, ಯುದ್ಧ ನಡೆದರೆ ನಾವೇ ಗೆಲ್ಲೋದು: ಪಾಕಿಸ್ತಾನ ಸಚಿವ ಆಸಿಫ್

ಮುಂದಿನ ಸುದ್ದಿ
Show comments