Publish Date: Fri, 30 Dec 2022 (09:00 IST)
Updated Date: Fri, 30 Dec 2022 (09:18 IST)
ಅಹಮ್ಮದಾಬಾದ್: ಪ್ರಧಾನಿ ಮೋದಿ ತಾಯಿ ಶತಾಯುಷಿ ಹೀರಾ ಬೆನ್ ಇಂದು ಬೆಳಗಿನ ಜಾವ ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಉಸಿರಾಟ ಸಂಬಂಧೀ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಅಹಮ್ಮದಾಬಾದ್ ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಬೆಳಗಿನ ಜಾವ 3.30 ಕ್ಕೆ ಅವರು ಕೊನೆಯುಸಿರೆಳೆದಿದ್ದಾರೆ.
ಗಾಂಧಿನಗರದಲ್ಲಿ ಹೀರಾ ಬೆನ್ ಅಂತಿಮ ಸಂಸ್ಕಾರ ನಡೆಸಲಾಗಿದೆ. ಪ್ರಧಾನಿ ಮೋದಿ ತಮ್ಮ ಪ್ರೀತಿಯ ತಾಯಿಯ ಅಂತಿಮ ಯಾತ್ರೆಗೆ ಹೆಗಲುಕೊಟ್ಟರು. ಪ್ರತೀ ಬಾರಿ ಹುಟ್ಟುಹಬ್ಬ, ವಿಶೇಷ ದಿನಗಳನ್ನು ತಾಯಿಯನ್ನು ಭೇಟಿ ಮಾಡಿ ಆಶೀರ್ವಾದ ಪಡೆಯಲು ಮೋದಿ ಮರೆಯುತ್ತಿರಲಿಲ್ಲ. ಇದೀಗ ಪ್ರಧಾನಿ ಮೋದಿ ಸೇರಿದಂತೆ ಒಟ್ಟು ಆರು ಮಕ್ಕಳನ್ನು ಹೀರಾ ಬೆನ್ ಅಗಲಿದ್ದಾರೆ. ಅವರ ಅಗಲುವಿಕೆಗೆ ರಾಜಕೀಯ ಗಣ್ಯರು, ಸಾರ್ವಜನಿಕರು ಸಂತಾಪ ವ್ಯಕ್ತಪಡಿಸಿದ್ದಾರೆ.