ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಸ್ವಿಟ್ಜರ್‌ಲೆಂಡ್ ರಾಷ್ಟ್ರಾಧ್ಯಕ್ಷ ಜಾನ್ ಸ್ನೈಡರ್ ಅಮ್ಮನ್ ಅವರನ್ನು ಭೇಟಿ ಮಾಡಿ ದ್ವಿಪಕ್ಷೀಯ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕತಾರ್ ದೇಶದ ದೋಹಾದಿಂದ ನಿನ್ನೆ ರಾತ್ರಿ ಇಲ್ಲಿಗೆ ಆಗಮಿಸಿದ ಮೋದಿ, ಕಪ್ಪುಹಣ ಸೇರಿದಂತೆ ಇತರ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇಂದು ಬೆಳಿಗ್ಗೆ ಸ್ವಿಸ್ ರಾಷ್ಟ್ರಾಧ್ಯಕ್ಷ ಸ್ನೈಡರ್ ಅಮ್ಮನ್ ಅವರನ್ನು ಪ್ರಧಾನಿ ಮೋದಿ ಭೇಟಿ ಮಾಡಿದರು ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ಟ್ವೀಟ್ ಮಾಡಿದ್ದಾರೆ.
ಐದು ದೇಶಗಳ ಪ್ರವಾಸದಲ್ಲಿರುವ ಮೋದಿ, ಯುರೋಪ್ ಖಂಡದಲ್ಲಿ ಸ್ವಿಸ್ ರಾಷ್ಟ್ರ ಭಾರತದ ಪ್ರಮುಖ ಪಾಲುದಾರ ರಾಷ್ಟ್ರ ಎಂದು ಬಣ್ಣಿಸಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ
ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.