Select Your Language

Notifications

webdunia
webdunia
webdunia
webdunia

ಏಕನಾಥ್ ಖಾಡ್ಸೆ ರಾಜೀನಾಮೆಗೆ ಫಡ್ನವೀಸ್ ರಹಸ್ಯ ಕಾರ್ಯಾಚರಣೆ ಕಾರಣ: ಶಿವಸೇನೆ

ಏಕನಾಥ್ ಖಾಡ್ಸೆ ರಾಜೀನಾಮೆಗೆ ಫಡ್ನವೀಸ್ ರಹಸ್ಯ ಕಾರ್ಯಾಚರಣೆ ಕಾರಣ: ಶಿವಸೇನೆ
ಮುಂಬೈ , ಸೋಮವಾರ, 6 ಜೂನ್ 2016 (15:00 IST)
ಅಕ್ರಮ ಭೂ ಕಬಳಿಕೆ ಮತ್ತು ದಾವೂದ್ ಇಬ್ರಾಹಿಂ ದೂರವಾಣೆ ಕರೆ ಆರೋಪಗಳಿಂದಾಗಿ ರಾಜೀನಾಮೆ ನೀಡಿದ ಬಿಜೆಪಿ ಮುಖಂಡ ಏಕನಾಥ್ ಖಾಡ್ಸೆ ಅವರನ್ನು ವಜಾಗೊಳಿಸಲು ಸಿಎಂ ದೇವೇಂದ್ರ ಫಡ್ನವೀಸ್ ರಹಸ್ಯವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಶಿವಸೇನೆ ಹೇಳಿಕೆ ನೀಡಿದೆ. 
 
ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ರಾಜಕೀಯದಲ್ಲಿ ಇನ್ನೂ ಮಗುವಾಗಿದ್ದರಿಂದ ರಾಜಕೀಯ ಅರ್ಥವಾಗುವುದಿಲ್ಲ. ನಾನೇ ಸರಕಾರವಿದ್ದಂತೆ ಎಂದು ಖಾಡ್ಸೆ ಭಾವಿಸಿರಬಹುದು. ಆದರೆ, ಫಡ್ನವೀಸ್ ಒಂದು ಕೈಯಲ್ಲಿ ಪಠಾಕಿ ಮತ್ತೊಂದು ಕೈಯಲ್ಲಿ ಗನ್‌ಪೌಡರ್ ಹಿಡಿದಿರುವುದನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಫಲವಾದರು ಎಂದು ಲೇವಡಿ ಮಾಡಿದೆ.
 
ಮಾಜಿ ಸಚಿವ ಏಕನಾಥ್ ಖಾಡ್ಸೆಯವರ ಆಪ್ತ ಸಹಾಯಕ ಗಜಾನನ್ ಪಾಟೀಲ್ ಅವರ ಅವ್ಯವಹಾರಗಳ ಬಗ್ಗೆ ಭ್ರಷ್ಟಾಚಾರ ನಿಗ್ರಹ ದಳ ಮಾಹಿತಿ ಸಂಗ್ರಹಿಸುತ್ತಿತ್ತು. ಆದರೆ, ಇದು ಖಾಡ್ಸೆಯವರಿಗೆ ಗೊತ್ತಿರಲಿಲ್ಲ. ಇದನ್ನು ನೋಡಿದಲ್ಲಿ ಫಡ್ನವೀಸ್ ಯಾವ ರೀತಿ ಕಾರ್ಯನಿರ್ವಹಿಸುತ್ತಿದ್ದರು ಎನ್ನುವುದು ತಿಳಿಯಬಹುದಾಗಿದೆ 
 
ತಮ್ಮದೇ ಸಚಿವ ಸಂಪುಟದ ಸದಸ್ಯ ಖಾಡ್ಸೆಯವರನ್ನು ಮುಖ್ಯಮಂತ್ರಿ ಫಡ್ನವೀಸ್ ಯಾಕೆ ಒಂದು ಬಾರಿಯಾದರೂ ಸಮರ್ಥಿಸಿಕೊಳ್ಳಲಿಲ್ಲ ಎಂದು ಶಿವಸೇನೆ ಪ್ರಶ್ನಿಸಿದೆ.
 
ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ. ಒಂದು ವೇಳೆ ತಪ್ಪಿತಸ್ಥ ಎಂದು ಸಾಬೀತಾದಲ್ಲಿ ರಾಜಕೀಯವನ್ನೇ ತೊರೆಯುವುದಾಗಿ ಖಾಡ್ಸೆ ಘೋಷಿಸಿದ್ದಾರೆ. ಭ್ರಷ್ಟಾಚಾರದ ಆರೋಪದ ಮೇಲೆ ಜೈಲಿನಲ್ಲಿರುವ ಛಗನ್ ಬುಜಭಲ್, ಆದರ್ಶ ಹಗರಣದ ಅಶೋಕ್ ಚವ್ಹಾಣ್, ರಾಬರ್ಟ್ ವಾದ್ರಾ ಕೂಡಾ ತಮ್ಮ ವಿರುದ್ಧದ ಆರೋಪಗಳಲ್ಲಿ ಸತ್ಯಾಂಶವಿಲ್ಲ ಎಂದು ಹೇಳುತ್ತಿರುವುದಾಗಿ ಶಿವಸೇನೆ ಲೇವಡಿ ಮಾಡಿದೆ.  

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ವಿಐಪಿ ಕಾರ್ ಸೈರನ್ ಬಳಕೆ ನಿಷೇಧಿಸಿದ ಉಪರಾಜ್ಯಪಾಲ ಕಿರಣ್ ಬೇಡಿ