Publish Date: Thu, 24 Aug 2017 (14:46 IST)
Updated Date: Thu, 24 Aug 2017 (14:50 IST)
ನವದೆಹಲಿ: ಉತ್ತರ ಪ್ರದೇಶದಲ್ಲಿ ಬೆನ್ನು ಬೆನ್ನಿಗೇ ರೈಲ್ವೇ ದುರಂತ ಸಂಭವಿಸಿದ ಹಿನ್ನಲೆಯಲ್ಲಿ ರೈಲ್ವೇ ಸಚಿವ ಸುರೇಶ್ ಪ್ರಭು ರಾಜೀನಾಮೆಗೆ ಮುಂದಾಗಿದ್ದರೂ, ಪ್ರಧಾನಿ ಮೋದಿ ಬೇಡ ಎಂದಿದ್ದರು ಎಂದು ವರದಿಯಾಗಿತ್ತು.
ಇದರ ಅಸಲಿ ಕಾರಣ ಏನೆಂಬುದು ಬಹಿರಂಗವಾಗಿದೆ. ಅಸಲಿಗೆ ಪ್ರಧಾನಿ ಮೋದಿ ಸುರೇಶ್ ಪ್ರಭು ಜಾಗಕ್ಕೆ ಹೊಸ ಸಚಿವರನ್ನು ನೇಮಿಸಲು ಚಿಂತನೆ ನಡೆಸುತ್ತಿದ್ದಾರಂತೆ.
ಸುರೇಶ್ ಪ್ರಭು ಸ್ಥಾನ ತುಂಬಲು ಸಮರ್ಥರಾದ ಸಂಸದರರಿಗಾಗಿ ಪ್ರಧಾನಿ ಮೋದಿ ಹುಡುಕಾಟ ನಡೆಸುತ್ತಿದ್ದಾರೆ. ಹೀಗಾಗಿ ಸಮರ್ಥ ಸಚಿವರನ್ನು ಹುಡುಕಿದ ಮೇಲೆ ಸುರೇಶ್ ಪ್ರಭು ಸ್ಥಾನಕ್ಕೆ ಕತ್ತರಿ ಬೀಳಲಿದೆ. ಇದೊಂದು ಮಹತ್ವದ ಇಲಾಖೆಯಾದ್ದರಿಂದ ಪ್ರಧಾನಿ ಮೋದಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.